
ಬೆಂಗಳೂರು, ಜು.23: ಕರ್ನಾಟಕ ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಸಂದರ್ಭದಲ್ಲಿ, ಬೇಸ್ ವರ್ಷದ (ಆಧಾರ ವರ್ಷ) ವಿವರಗಳನ್ನು ಹಿಂಪಡೆಯಲು ಸಾಧ್ಯವಾಗದ ಕಾರಣ 17.19 ಲಕ್ಷ ಎನ್ಯುಮರೇಶನ್ (ಗಣತಿ) ಫಾರ್ಮ್ಗಳು ‘ಪ್ರೊಜೆನಿ ಮ್ಯಾಪಿಂಗ್’ (ವಂಶಾವಳಿ/ವAಶವೃಕ್ಷ ಜೋಡಣೆ) ಮಾಹಿತಿಯಿಲ್ಲದೆ ಸಲ್ಲಿಕೆಯಾಗಿವೆ ಎಂದು ಚುನಾವಣಾ ಆಯೋಗ ತಿಳಿಸಿದೆ. ರಾಜ್ಯಾದ್ಯಂತ ಮನೆ-ಮನೆ ಗಣತಿಯ ವೇಳೆ ವಿತರಿಸಲಾದ ಒಟ್ಟು 5.53 ಕೋಟಿ ಎಸ್ಐಆರ್ ಫಾರ್ಮ್ಗಳಲ್ಲಿ ಇದುವರೆಗೆ 3.67 ಕೋಟಿ (ಶೇ. 66.35) ಫಾರ್ಮ್ಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ. 1.56 ಕೋಟಿ ಮತದಾರರ ಸ್ವಯಂ ಮ್ಯಾಪಿಂಗ್, 1.93 ಕೋಟಿ ಮತದಾರರು ವಂಶಾವಳಿ ಮ್ಯಾಪಿಂಗ್, 17.19 ಲಕ್ಷ (ಶೇ. 3.1) ಫಾರ್ಮ್ಗಳನ್ನು ಯಾವುದೇ ಮ್ಯಾಪಿಂಗ್ ವಿವರಗಳಿಲ್ಲದೆ ಸಲ್ಲಿಸಲಾಗಿದೆ.
ಮ್ಯಾಪಿಂಗ್ ವಿವರಗಳು ಲಭ್ಯವಿಲ್ಲದಿದ್ದರೂ ಸಹ, ಮತದಾರರು ತಮ್ಮ ಫಾರ್ಮ್ಗಳನ್ನು ಆಗಸ್ಟ್ 8 ರೊಳಗೆ ತಮ್ಮ ಮತಗಟ್ಟೆ ಹಂತದ ಅಧಿಕಾರಿಗಳಿಗೆ ಕಡ್ಡಾಯವಾಗಿ ಸಲ್ಲಿಸಬೇಕು. ಫಾರ್ಮ್ಗಳನ್ನು ಸಲ್ಲಿಸಲು ಕುಟುಂಬದ ಯಾವುದೇ ವಯಸ್ಕ ಸದಸ್ಯರು/ಪ್ರಬುದ್ಧರು ಕ್ರಮ ಕೈಗೊಳ್ಳಬಹುದು. ಫಾರ್ಮ್ ಸಲ್ಲಿಸುವ ಪ್ರತಿಯೊಬ್ಬರ ಹೆಸರನ್ನು ಆಗಸ್ಟ್ 17 ರಂದು ಪ್ರಕಟವಾಗಲಿರುವ ಕರಡು ಮತದಾರರ ಪಟ್ಟಿಯಲ್ಲಿ ಸೇರಿಸಲಾಗುತ್ತದೆ. ಮಾಹಿತಿಯಲ್ಲಿ ವ್ಯತ್ಯಾಸವಿದ್ದರೆ ಅಥವಾ ಡೇಟಾ ಇಲ್ಲದಿದ್ದರೆ ಮತದಾರರಿಗೆ ನೋಟಿಸ್ ನೀಡಲಾಗುವುದು. ಅವರು ಫಾರ್ಮ್ ಹಿಂಭಾಗದಲ್ಲಿ ನಮೂದಿಸಿರುವ 11 ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಸಲ್ಲಿಸಿ ಸರಿಪಡಿಸಿಕೊಳ್ಳಬಹುದು ಎಂದು ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ತಿಳಿಸಿದ್ದಾರೆ.



.
.
.
.
.
.
.
.
.
.
.
.
.
.
.
.
.
.
.
.
