ಬೆಂಗಳೂರು: ವಕ್ಫ್ ಕಾಯ್ದೆಗೆ ತಿದ್ದುಪಡಿ ತರುವ ಸಲುವಾಗಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆಯಿಟ್ಟಿದ್ದು, ಈ ಹಿನ್ನಲೆಯಲ್ಲಿ ವಕ್ಫ್ ಮಂಡಳಿಯು ತರಾತುರಿಯಲ್ಲಿ ಸರ್ಕಾರದ ಬೆಂಬಲ ಪಡೆದು ಭೂಮಿಯನ್ನು ನೋಂದಾಯಿಸಲು ಆತುರದ ಪ್ರಯತ್ನಗಳು ನಡೆಯುತ್ತಿವೆ ಎಂದು ರಾಜ್ಯ ಬಿಜೆಪಿ ಮುಖಂಡರು ಕೇಂದ್ರ ಸಚಿವರಿಗೆ ಪತ್ರ ಬರೆದಿದ್ದಾರೆ.
ಜಂಟಿ ಸಂಸದೀಯ ಸಮಿತಿಯ ಪ್ರಕ್ರಿಯೆಗಳು ಪೂರ್ಣಗೊಳ್ಳುವವರೆಗೆ ವಕ್ಫ್ ಮಂಡಳಿಗೆ ಎಲ್ಲಾ ಭೂ ನೋಂದಣಿಗಳನ್ನು ತಕ್ಷಣವೇ ನಿಲ್ಲಿಸಲು ರಾಜ್ಯಕ್ಕೆ ಸೂಚನೆ ನೀಡುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಜಂಟೀ ಸಂಸದೀಯ ಸಮಿತಿಯ ಅಧ್ಯಕ್ಷರನ್ನು ವಿಪಕ್ಷ ನಾಯಕ ಆರ್.ಅಶೋಕ್ ಒತ್ತಾಯಿಸಿದ್ದಾರೆ.
ಈ ಪ್ರಯತ್ನದ ಭಾಗವಾಗಿ ರಾಜ್ಯ ಸರ್ಕಾರ ಮತ್ತು ವಕ್ಫ್ ಮಂಡಳಿಯು ಕಂದಾಯ ಇಲಾಖೆಯ ದಾಖಲೆಗಳನ್ನು ಅಕ್ರಮವಾಗಿ ಬದಲಾಯಿಸಲು ಪ್ರಾರಂಭಿಸಿದೆ, ರೈತರ ಭೂಮಿಯ ಮಾಲೀಕತ್ವವನ್ನು ವಕ್ಫ್ ಬೋರ್ಡ್ ವರ್ಗಾಯಿಸಲು ಪ್ರಾರಂಭಿಸಿದೆ ಎಂದು ವರದಿಯಾಗಿದೆ. ಜಮೀನಿಗೆ ಬಿಳಿಬಣ್ಣ ಬಳಿಯುವುದು ಮತ್ತು ವಕ್ಫ್ ಮಂಡಳಿಗಳಿಗೆ ಅನ್ಯಾಯದ ಭೂಮಿಯನ್ನು ನೋಂದಾಯಿಸುವುದರಿAದ ಕರ್ನಾಟಕದ ಸಾವಿರಾರು ರೈತರು ಮತ್ತು ಬಡಜನರು ನ್ಯಾಯಯುತ ಮತ್ತು ಪೂರ್ವಜರ ಆಸ್ತಿ ಹಕ್ಕುಗಳನ್ನು ಕಸಿದುಕೊಳ್ಳಲಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ವಿಜಯಪುರ ಜಿಲ್ಲೆಯಲ್ಲಿ ಸುಮಾರು 15,000 ಎಕರೆ ಭೂಮಿಯ ಹಕ್ಕುಪತ್ರಗಳಿಗೆ ಸಂಬAಧಿಸಿದAತೆ ನೂರಾರು ರೈತರಿಗೆ ನೋಟಿಸ್ ಕಳುಹಿಸಿದಾಗ ಈ ವಿಷಯ ಬಯಲಾಗಿದೆ, ವಕ್ಫ್ ಮಂಡಳಿಯು ಕರ್ನಾಟಕದ ಪ್ರತೀ ಜಿಲ್ಲೆಯಾದ್ಯಂತ ಸುಮಾರು 10,000 ಎಕರೆ ಭೂಮಿಯನ್ನು ರಹಸ್ಯವಾಗಿ ಅಕ್ರಮವಾಗಿ ಹಕ್ಕು ಸಾಧಿಸಲು ಪ್ರಯತ್ನಿಸುತ್ತದೆ ಎಂದು ಪತ್ರದಲ್ಲಿ ಆರೋಪಿಸಿಲಾಗಿದೆ