
ಕಾರ್ಕಳ : ಶ್ರವಣ ಸಮಸ್ಯೆಯಿಂದ ಬಳುತ್ತಿದ್ದ ಕಾರ್ಕಳ ತಾಲೂಕಿನ ಬೈಲೂರು ಗ್ರಾಮದ ಧೃತಿ ಶ್ರೀಯಾನ್ ಎಂಬ ಹೆಣ್ಣು ಮಗುವಿಗೆ ಶಾಸಕ ವಿ. ಸುನಿಲ್ ಕುಮಾರ್ ಅವರು 6.50 ಲಕ್ಷ ರೂಪಾಯಿ ವೆಚ್ಚದ ಕಾಕ್ಲಿಯರ್ ಇಂಪ್ಲಾಂಟ್ (ಶ್ರವಣದೋಷವನ್ನು ನಿರ್ವಹಿಸಲು ಸಹಾಯ ಮಾಡುವ ಎಲೆಕ್ಟ್ರಾನಿಕ್ ಸಾಧನ) ಸಾಧನವನ್ನು ನೀಡಿದರು.
ಈ ಸಾಧನದ ಇಂಪ್ಲಾಂಟ್ ಬೆಂಗಳೂರಿನಲ್ಲಿ ನಡೆಯಲಿದ್ದು, ಮುಂದಿನ ಚಿಕಿತ್ಸೆಗೂ ಕೂಡ ಸಹಾಯ ಮಾಡುವುದಾಗಿ ಶಾಸಕರು ಭರವಸೆ ನೀಡಿರುವುದು ಮಗುವಿನ ಕುಟುಂಬದ ನಗುವಿಗೆ ಕಾರಣವಾಗಿದೆ.

