Share this news

ಮಣಿಪಾಲ: ವಿದ್ಯಾರ್ಥಿ ಎಂಬ ನಾಣ್ಯ ಬಹುಮೂಲ್ಯವಾಗಲು ಶಿಕ್ಷಕರು ಮತ್ತು ಪೋಷಕರೆಂಬ ಎರಡು ಮುಖಗಳ ಪಾತ್ರ ಬಹುಮುಖ್ಯ. ಕನಸು ಹೊತ್ತ ವಿದ್ಯಾರ್ಥಿಗಳನ್ನು ಪೋಷಿಸುವ ಪೋಷಕರು, ವಿದ್ಯಾಭ್ಯಾಸ ನೀಡುವ ಶಿಕ್ಷಕರನ್ನು ನಾವು ಗೌರವಿಸಬೇಕು. ಈ ನಿಟ್ಟಿನಲ್ಲಿ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಕಾರ್ಯ ಮೆಚ್ಚುವಂತಹದ್ದು. ಶಿಕ್ಷಣದ ಜೊತೆಜೊತೆಗೆ ಸಂಸ್ಕಾರ, ದೇಶಭಕ್ತಿ, ಮೌಲ್ಯಯುತ ಶಿಕ್ಷಣಕ್ಕೂ ಪ್ರಾಶಸ್ತ್ಯ ಕೊಡುತ್ತಿರುವುದು ಆದರ್ಶಪ್ರಾಯ ಎಂದು ರಾಷ್ಟ್ರೀಯ ಮಹಿಳಾ ಅಯೋಗದ ಮಾಜಿ ಸದಸ್ಯರಾದ ಶ್ರೀಮತಿ ಶ್ಯಾಮಲಾ ಎಸ್ ಕುಂದರ್ ಹೇಳಿದರು.

ಅವರು ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜು ವಿದ್ಯಾ ನಗರದಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಬ್ರಹ್ಮಾವರ ಸರಕಾರಿ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕರಾದ ಶ್ರೀ ಸಂಜೀವ ಶೆಟ್ಟಿ ಕೊರ್ಗಿ, ಬಿ.ಎಮ್.ಎಮ್. ಪ್ರೌಢಶಾಲೆ ಕೂರಾಡಿಯ ನಿವೃತ್ತ ಮುಖ್ಯ ಶಿಕ್ಷಕರಾದ ಶ್ರೀ ಎಸ್ ಮೂರ್ತಿ ರಾವ್, ಶ್ರೀ ವಿಷ್ಣು ಮೂರ್ತಿ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕರಾದ ಶ್ರೀ ಅನಂತ ಪದ್ಮನಾಭ ಭಟ್, ಪಂಚನಬೆಟ್ಟು ವಿದ್ಯಾವರ್ಧಕ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕರಾದ ಶ್ರೀ ರಮೇಶ್ ಶೇರ್ವೆಗಾರ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ನಿವೃತ್ತ ಮುಖ್ಯ ಶಿಕ್ಷಕರಾದ ಶ್ರೀ ರಮೇಶ್ ಶೇರ್ವೆಗಾರ್ ಮಾತನಾಡಿ ಜ್ಞಾನಸುಧಾ ಶೈಕ್ಞಣಿಕ ಸಾಧನೆಗಳನ್ನು ಶ್ಲಾಘಿಸಿದರು.

ನಿವೃತ್ತ ಮುಖ್ಯ ಶಿಕ್ಷಕರಾದ ಶ್ರೀ ಸಂಜೀವ ಶೆಟ್ಟಿ ಕೊರ್ಗಿ ತಮ್ಮ ಶಿಕ್ಷಕ ವೃತ್ತಿಯ ಅನುಭವ ಹಂಚಿಕೊಂಡರು ಮಣಿಪಾಲ ಜ್ಞಾನಸುಧಾ ಪ್ರಾಂಶುಪಾಲರಾದ ಗಣೇಶ್ ಶೆಟ್ಟಿ ಸ್ವಾಗತಿಸಿದರು. ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ನ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀಮತಿ ಜ್ಯೋತಿ ಪದ್ಮನಾಭ ಬಂಡಿ ವೇದಿಕೆಯಲ್ಲಿದ್ದರು. ಮಣಿಪಾಲ ಜ್ಞಾನಸುಧಾ ಉಪಪ್ರಾಂಶುಪಾಲರಾದ ಶ್ರೀ ರವಿ ಜಿ ಮತ್ತು ಶ್ರೀ ಹೇಮಂತ, ಉಪನ್ಯಾಸಕ ಬಳಗ ಉಪಸ್ಥಿತರಿದ್ದರು. ಗಣಿತ ಶಾಸ್ತ್ರ ಉಪನ್ಯಾಸಕಿ ಕುಮಾರಿ ನಕ್ಷಾ ಕಲ್ಕೂರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಉಡುಪಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಮಾತನಾಡಿದ ಖ್ಯಾತ ವಾಗ್ಮಿಗಳಾಗಿರುವ ಎನ್ ಆರ್ ದಾಮೋದರ ಶರ್ಮ, ಭಗವಂತನೇ ಧರೆಗಿಳಿದು ಬಂದಾಗ ಅವನಿಗೆ ಮಾತ್ರ ನೀಡಿದ್ದು ಗುರುಗಳು. ಇಂತಹ ಭವ್ಯ ಗುರು ಪರಂಪರೆ ಹೊಂದಿರುವ ಭಾರತದಲ್ಲಿ ಹುಟ್ಟಿದ ನಾವೇ ಧನ್ಯರು. ಗುರು ತೋರಿದ ಮಾರ್ಗದಲ್ಲಿ ನಡೆದ ಯಾವ ವಿದ್ಯಾರ್ಥಿಯೂ ಬದುಕಿನಲ್ಲಿ ಅದಃಪತನಕ್ಕೆ ಹೋಗಲಾರನು. ಜ್ಞಾನಸುಧಾದಲ್ಲಿ ಬದುಕಿನ ಸಾಧನೆಗಳನ್ನು ಶಾಶ್ವತವಾಗಿಸಬಲ್ಲ ಜ್ಞಾನವೆಂಬ ಅಮೃತವನ್ನು ಪಡೆದು ಸುಂದರ ಬದುಕನ್ನು ಕಟ್ಟಿಕೊಳ್ಳಿ. ಮನೋನಿಯಂತ್ರಣದ ಜೊತೆಗೆ ಸಚ್ಚಾರಿತ್ರ್ಯದ ಬದುಕು ನಿಮ್ಮದಾಗಲಿ ಎಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಹೇಳಿದರು.

ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ. ಸುಧಾಕರ ಶೆಟ್ಟಿಯವರು ಹೆತ್ತವರ ಮನಸು ನೋಯಿಸದಂತೆ ನೋಡಿಕೊಳ್ಳುವ ಗುರುತರ ಜವಾಬ್ದಾರಿ ನಿಮ್ಮದು. ವನಸುಮದಂತೆ ಯಾವುದೇ ಫಲಾಪೇಕ್ಷೆಯಿಲ್ಲದೆ ಬದುಕ ನಡೆಸಿದ ಎಲ್ಲಾ ಶಿಕ್ಷಕರುಗಳ ಜೀವನಧಾರೆ ನಮಗೆ ಮಾದರಿಯಾಗಲಿ ಎಂದರು.

ಸನ್ಮಾನವನ್ನು ಸ್ವೀಕರಿಸಿದ ಶ್ರೀಯುತ ಮುರಲಿ ಕಡೆಕಾರ್ ಮಾತನಾಡಿ ದೇವರು ಕೊಟ್ಟ ಶ್ರೇಷ್ಠ ಜೀವನವನ್ನು ಹಾಳುಮಾಡಿಕೊಳ್ಳಬೇಡಿ. ಗಣಿತಕ್ಕಾಗಿ ಒಂದು ನಗರವನ್ನು ಕಟ್ಟಿ ಬೆಳೆಸುವ ಶ್ರಮ ಸಾಮಾನ್ಯವಾದುದಲ್ಲ. ವಿದ್ಯಾರ್ಜನೆಗೆ ಬಂದ ನಿಮಗೆ ಡಾ. ಸುಧಾಕರ ಶೆಟ್ಟಿಯವರೇ ಮಾದರಿ ವ್ಯಕ್ತಿತ್ವ ಅವರಂತೆ ಬಾಳಿ ಬದುಕಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ನಿಟ್ಟೂರು ಪ್ರೌಢ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಮುರಲಿ ಕಡೆಕಾರ್, ಕಮಲಾಬಾಯಿ ಪ್ರೌಢ ಶಾಲೆ ಕಡಿಯಾಳಿ ಇಲ್ಲಿಯ ನಿವೃತ್ತ ಮುಖ್ಯೊಪಾಧ್ಯಾಯರಾದ ಸುದರ್ಶನ್ ನಾಯಕ್, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಕ್ಕೆಹಳ್ಳಿಯ ನಿವೃತ್ತ ಶಿಕ್ಷಕರಾದ ಶ್ರೀಮತಿ ಎಚ್ ಎಮ್ ಯಶೋಧ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ
ಹನುಮಂತನಗರ ಇಲ್ಲಿಯ ನಿವೃತ್ತ ಮುಖ್ಯೋಪಾಧ್ಯಾಯರಾದ ಸುಧಾಕರ ಎನ್ ಇವರನ್ನು ಸನ್ಮಾನಿಸಲಾಯಿತು.

ಉಡುಪಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸಂತೋಷ್‌ರವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಪ್ರಾಂಶುಪಾಲರಾದ ಪ್ರಕಾಶ್ ಜೋಗಿ ವಂದಿಸಿ, ಕನ್ನಡ ಉಪನ್ಯಾಸಕಿ ಶ್ರೀಮತಿ ಪವಿತ್ರ ಕಾರ್ಯಕ್ರಮ ನಿರೂಪಿಸಿದರು.

 

 

 

 

 

 

 

  

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

  

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *