ದಾವಣಗೆರೆ : ದಾವಣಗೆರೆಯಲ್ಲಿ ಭೀಖರವಾದ ಅಗ್ನಿ ದುರಂತ ಸಂಭವಿಸಿದ್ದು, ಜಗಳೂರು ತಾಲೂಕು ಕಛೇರಿಯ ರೆಕಾರ್ಡ್ ರೂಮ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸರ್ಕಾರಿ ಕಚೇರಿಗೆ ಬೆಂಕಿ ಬಿದ್ದು ದಾಖಲೆಗಳೆಲ್ಲ ಸುಟ್ಟು ಭಸ್ಮವಾಗಿರುವ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕು ಕಚೇರಿಯಲ್ಲಿ ನಡೆದಿದೆ. ಬೆಂಕಿ ಹೊತ್ತಿಕೊಂಡು ತಾಲೂಕು ಕಚೇರಿಯ ಎರಡು ರೂಮ್ಗಳಲ್ಲಿದ್ದ ದಾಖಲೆಗಳು ಸುಟ್ಟು ಭಸ್ಮವಾಗಿವೆ. ಕೂಡಲೇ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಬೆಂಕಿ ಬಿದ್ದ ಕಚೇರಿಯಲ್ಲಿ ದಾಖಲೆಗಳು ಇರಲಿಲ್ಲ. ರೂಮ್ನಲ್ಲಿ ಕೇವಲ ರದ್ಧಿ ಪೇಪರ್ ಗಳು ಮಾತ್ರ ಇದ್ದವು ಎಂದು ತಹಶೀಲ್ದಾರ್ ಹೇಳಿಕೆ ನೀಡಿದ್ದಾರೆ. ಘಟನೆ ಕುರಿತಂತೆ ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.