
ಬೆಂಗಳೂರು,ಏ.13 : ಸಚಿವ ಸ್ಥಾನ ನಿಭಾಯಿಸಲು ಸಮರ್ಥರಿರುವ ಶಾಸಕರು ಸಚಿವ ಸ್ಥಾನ ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿದ್ದಾರೆ.
ಅವರು ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಶಾಸಕರು ಹೈಕಮಾಂಡ್ ಭೇಟಿಗೆ ದೆಹಲಿಗೆ ತೆರಳಿರುವ ವಿಚಾರಕ್ಕೆ ಕುರಿತಂತೆ ಪ್ರತಿಕ್ರಿಯೆ ನೀಡಿದ್ದು,ನಮ್ಮ ಪಕ್ಷದ ಶಾಸಕರು ಸಮರ್ಥರಾಗಿದ್ದು ಸಚಿವ ಸ್ಥಾನ ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ. ಮಂತ್ರಿ ಮಾಡುವ ಬಗ್ಗೆ ಹೈಕಮಾಂಡ್ ಮತ್ತು ಸಿಎಂ ಸಿದ್ದರಾಮಯ್ಯ ನಿರ್ಧಾರ ಮಾಡುತ್ತಾರೆ. ಅದು ಜೂಜಾಟವಲ್ಲ, ಅರ್ಹತೆ ಇದ್ದವರಿಗೆ ಕೊಡಿ ಎನ್ನುವುದರಲ್ಲಿ ತಪ್ಪಿಲ್ಲ. ನಾಯಕತ್ವ ಬದಲಾವಣೆ ಸೇರಿ ಎಲ್ಲವನ್ನು ಹೈಕಮಾಂಡ್ ಮಾಡುತ್ತದೆ. ಯಾವಾಗ ಸಚಿವ ಸಂಪುಟ ಪುನರಚನೆ ಮಾಡಬೇಕು ಅಂತ ಹೈಕಮಾಂಡ್ ಅವರಿಗೆ ಗೊತ್ತಿದೆ. ಶಾಸಕರು ಒಟ್ಟಾಗಿ ಮಂತ್ರಿ ಸ್ಥಾನ ಕೇಳಲು ಹೋಗಿದ್ದಾರೆ ಅಷ್ಟೇ, ಹಿಂದೆಯೂ ಸಚಿವ ಸ್ಥಾನದ ಆಕಾಂಕ್ಷಿಗಳು ದೆಹಲಿಗೆ ಹೋಗಿದ್ದರು ಎಂದು ಜಿ ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
















.
.
.
.
.
.
.
.
.
.
