ಬಾಗಲಕೋಟೆ: ಪ್ರತೀವರ್ಷ ಬೇಸಿಗೆ ಆರಂಭವಾದರೆ ಸಾಕು ಪವರ್ ಕಟ್ ಸರ್ವೇಸಾಮಾನ್ಯ. ಇನ್ನೇನು ಕೆಲವೇ ದಿನಗಳಲ್ಲಿ ಬಿರುಬೇಸಗೆ ಆರಂಭವಾಗಲಿದೆ. ಒಂದೆಡೆ ವಿಪರೀತ ಸುಡುವ ಬಿಸಿಲು ಇನ್ನೊಂದೆಡೆ ಲೋಡ್ ಶೆಡ್ಡಿಂಗ್ ನಿಂದ ಜನ ಸೆಕೆಯಿಂದ ಬಳಲಿ ಬೆಂಡಾಗುತ್ತಾರೆ. ಆದರೆ ಈ ಬಾರಿ ರಾಜ್ಯದ ಜನತೆಗೆ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ಈ ಬಾರಿ ಬೇಸಿಗೆಯಲ್ಲಿ ಯಾವುದೇ ರೀತಿಯ ಲೋಡ್ ಶೆಡ್ಡಿಂಗ್ ಇಲ್ಲವೆಂದು ಇಂಧನ ಸಚಿವ ಕೆಜೆ ಜಾರ್ಜ್ ತಿಳಿಸಿದ್ದಾರೆ.
ಬಾಗಲಕೋಟೆಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ಬೇಸಿಗೆ ಸಂದರ್ಭದಲ್ಲಿ ಲೋಡ್ ಶೆಡ್ಡಿಂಗ್ ಇರುವುದಿಲ್ಲ. ರಾಜ್ಯದಲ್ಲಿ ಬರಗಾಲ ಇದ್ದಾಗಲೇ ಲೋಡ್ ಶೆಡ್ಡಿಂಗ್ ಮಾಡಿಲ್ಲ, ಹಾಗಾಗಿ ಈ ವರ್ಷ ಬೇಸಿಗೆಯಲ್ಲಿ ಪವರ್ ಕಟ್ ಇರುವುದಿಲ್ಲ ಎಂದು ತಿಳಿಸಿದರು.ಒಂದು ವೇಳೆ ವಿದ್ಯುತ್ ಕೊರತೆ ಉಂಟಾದರೆ ಬೇರೆ ಕಡೆಯಿಂದ ವಿದ್ಯುತ್ ಖರೀದಿಸುತ್ತೇವೆ.ಈ ವರ್ಷವೂ ಬೇಡಿಕೆ ಹೆಚ್ಚಿದ್ದು, ಪ್ರಸ್ತುತ 16 ರಿಂದ 17 ಸಾವಿರ ಮೆಗಾ ವ್ಯಾಟ್ ಬೇಡಿಕೆಯಿದೆ ಎಂದು ಸಚಿವರು ಹೇಳಿದರು.