ಕಾರ್ಕಳ : ಇನ್ನಾ ಗ್ರಾಮದಲ್ಲಿ ವಿದ್ಯುತ್ ಟವರ್ ನಿರ್ಮಾಣಕ್ಕೆ ಗ್ರಾಮಸ್ಥರ ವಿರೋಧದ ನಡುವೆಯೂ ಅಧಿಕಾರಿಗಳು ಯಾರಿಗೂ ಮಾಹಿತಿಯನ್ನು ನೀಡದೇ, ಏಕಾಏಕಿ ಟವರ್ ನಿರ್ಮಾಣಕ್ಕೆ ಮುಂದಾಗಿರುವ ವಿಚಾರ ತಿಳಿದ ತಕ್ಷಣವೇ ಕಾರ್ಕಳ ಬಿಜೆಪಿ ಕಾರ್ಯಕರ್ತರಾದ ನಾವೆಲ್ಲರೂ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಲು ಸ್ಥಳಕ್ಕೆ ಭೇಟಿ ನೀಡಿದ್ದೆವು. ಆದರೆ ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ಉದಯ್ ಕುಮಾರ್ ಶೆಟ್ಟಿ ಸ್ಥಳಕ್ಕೆ ಆಗಮಿಸಿ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳುವುದನ್ನು ಬಿಟ್ಟು ರಾಜಕೀಯ ಬೆಳೆಬೇಯಿಸಲು ಮುಂದಾಗಿರುವುದು ಖಂಡನೀಯ ಎಂದು ಕಾರ್ಕಳ ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ಆರೋಪಿಸಿದ್ದಾರೆ.
ಈ ಕಾಮಗಾರಿಯು ಯಾವ ಪಕ್ಷದ ಆಡಳಿvದÀ ಸಂದರ್ಭದಲ್ಲಿಯೇ ಆಗಿರಲಿ, ಅಥವಾ ಕೇಂದ್ರ/ರಾಜ್ಯ ಯಾವುದೇ ಸರ್ಕಾರ ನಡೆಸಿರಲಿ, ಇದರಿಂದ
À ರೈತರಿಗೆ ಸಮಸ್ಯೆ ಆದಲ್ಲಿ ಅದನ್ನು ಪಕ್ಷಾತೀತವಾಗಿ ಖಂಡಿಸುವAತಹ ಕೆಲಸವನ್ನು ನಾವೆಲ್ಲರೂ ಮಾಡಬೇಕಾಗಿದೆ. ಇದಕ್ಕಾಗಿ ಪಕ್ಷಾತೀತವಾಗಿ ಹೋರಾಟ ನಡೆಸಬೇಕಾಗಿದೆ. ಆದರೆ ಇಂತಹ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿ ತನ್ನ ರಾಜಕೀಯ ಬೇಳೆಬೇಯಿಸುವುದರಲಿ ್ಲನಿರತರಾದ ಕಾಂಗ್ರೆಸ್ ನಾಯಕರ ಈ ನಡೆ, ಅಲ್ಲಿರುವ ರೈತರಿಗೂ ಇರಿಸುಮುರಿಸು ಆಗಿರುವುದು ನಮ್ಮ ಗಮನಕ್ಕೆ ಬಂದಿರುತ್ತದೆ. ಈ ಹಿಂದೆಯೂ ಪ್ರತಿಭಟನೆಯ ಸಂದರ್ಭದಲ್ಲಿ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಆಗಮಿಸಿ ರೈತರ ವಿಶ್ವಾಸವನ್ನು ತೆಗೆದುಕೊಂಡು, ಮುಂದಿನ ದಿನಗಳಲ್ಲಿ ಕಾಮಗಾರಿ ಆರಂಭಿಸುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ ಇಂದು ನೇರವಾಗಿ ಹಾಲಿ ಇಂಧನ ಸಚಿವ ಕೆಜೆ ಜಾರ್ಜ್ ಆದೇಶದ ಮೇರೆಗೆ ಈ ಕಾಮಗಾರಿ ಆರಂಭವಾಗಿದೆ ಎಂಬ ವಿಚಾರ ತಿಳಿದುಬಂದಿದೆ. ಈ ತರಹ ರಾಜಕೀಯ ಬೇಳೆಬೇಯಿಸಿಕೊಂಡರೆ ಇದರಿಂದ ಲಾಭ ಪಡೆಯುವುದು ಬಂಡವಾಳಶಾಹಿಗಳು, ದ್ರೋಹಕ್ಕೆ ಒಳಗಾಗುವುದು ಮಾತ್ರ ಬಡರೈತರು ಎಂಬುವುದನ್ನು ನಾವು ಮನಗಾಣಬೇಕು.
ರಾಜ್ಯದಲ್ಲಿ ಭಾರತೀಯ ಜನತಾಪಾರ್ಟಿ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ರೈತರಿಗೆ ತೊಂದರೆಯಾಗುವುದನ್ನು ಮನಗಂಡು ಕಾರ್ಕಳ ಶಾಸಕ ಸುನಿಲ್ ಕುಮಾರ್ ಸರ್ಕಾರದಲ್ಲಿ ಒತ್ತೆ ಹೇರುವ ಮೂಲಕ ಕಾಮಗಾರಿ ನಡೆಯದಂತೆ ತಡೆಹಿಡಿದಿದ್ದರು. ಪ್ರಸ್ತುತ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತದಲ್ಲಿದ್ದು, ಉದಯ್ ಕುಮಾರ್ ಶೆಟ್ಟಿಯವರೇ, ನಿಮ್ಮದೇ ಸರ್ಕಾರವಿದೆ,ಆದರೆ ಏಕಾಏಕಿ ಯಾರಿಗೂ ಮಾಹಿತಿನೀಡದೇ ಕಾಮಗಾರಿ ಏಕೆ ಆರಂಭವಾಯಿತು? ನಿಮ್ಮ ಪಕ್ಷದಲ್ಲಿ ಅಧಿಕಾರವಿದೆ. ನಿಮ್ಮಸಚಿವರಿಗೆ, ನಿಮ್ಮದೇ ಪಕ್ಷದ ಮುಖ್ಯಮಂತ್ರಿಗಳಿಗೆ ಒತ್ತಡಹೇರಿ ಕಾಮಗಾರಿನಿಲ್ಲಿಸಬಹುದಿತ್ತಲ್ಲವೇ? ಅದನ್ನುಬಿಟ್ಟು ಸ್ಥಳಕ್ಕೆ ಬಂದು ರೈತರ ಹೋರಾಟದಲ್ಲಿ ರಾಜಕೀಯ ಬೆರೆಸುವುದುಎಷ್ಟುಸರಿ? ನಿಮಗೆ ನಿಮ್ಮಪಕ್ಷದಲ್ಲಿ ಅಸ್ಥಿತ್ವ ಇಲ್ಲವೇ ಎಂದು ನವೀನ್ ನಾಯಕ್ ಪ್ರಶ್ನಿಸಿದ್ದಾರೆ.
ರೈತರನ್ನು ಬಲಿಕೊಟ್ಟು ರಾಜಕೀಯ ಮಾಡುವುದು ಯಾರಿಗೂ ಶೋಭೆ ತರುವುದಿಲ್ಲ, ಆದ್ದರಿಂದ ನಿಮ್ಮ ಚಿಲ್ಲರೆ ರಾಜಕೀಯ ಬಿಟ್ಟು ಪಕ್ಷಾತೀತ ಹೋರಾಟ ಮಾಡೋಣ, ಇಲ್ಲವಾದಲ್ಲಿ ಬಜೆಪಿ ರೈತರ ಜತೆ ಭಾಗಿಯಾಗಿ ಹೋರಾಟ ನಡೆಸಲಿದೆ ಎಂದು ನವೀನ್ ನಾಯಕ್ ಹೇಳಿದ್ದಾರೆ.