ಉಡುಪಿ: ಶಿಕ್ಷಕರ ದಿನಾಚರಣೆಯ ಅಂಗವಾಗಿ ಈ ವರ್ಷದಿಂದ ಜಯಕರ್ನಾಟಕ ಜನಪರ ವೇದಿಕೆಯ ಉಡುಪಿ ಜಿಲ್ಲಾ ಘಟಕದಿಂದ ನೀಡುವ ಜಯಕರ್ನಾಟಕ ಜನಪರ ಶಿಕ್ಷಕ ಪ್ರಶಸ್ತಿಗೆ ಉಡುಪಿ ಜಿಲ್ಲೆಯ ಇಬ್ಬರು ಪ್ರತಿಭಾನ್ವಿತ, ಜನಪರ, ಸಾಧಕ ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ ಎಂಬುದಾಗಿ ವೇದಿಕೆಯ ಜಿಲ್ಲಾಧ್ಯಕ್ಷ ಜನನಿ ದಿವಾಕರ ಶೆಟ್ಟಿಯವರು ತಿಳಿಸಿದ್ದಾರೆ.
ಜಿಲ್ಲೆಯಿಂದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗಕ್ಕೆ ಒಟ್ಟು 34 ಹೆಸರುಗಳು ಸೂಚನೆ ಆಗಿದ್ದು, ಅವರಲ್ಲಿ ಪ್ರಾಥಮಿಕ ವಿಭಾಗದಿಂದ ಕಾರ್ಕಳ ತಾಲೂಕಿನ ಮುದ್ದಣ್ಣ ನಗರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಗೀತಾ ಚಂದ್ರ ಆಚಾರ್ಯ ಹಾಗೂ ಪ್ರೌಢ ವಿಭಾಗದಿಂದ ಕುಂದಾಪುರ ತಾಲೂಕಿನ ಹೆಸ್ಕುತ್ತೂರು ಪ್ರೌಢಶಾಲೆಯ ಮುಖ್ಯ ಶಿಕ್ಷಕ ಅಬ್ದುಲ್ ರವೂಫ್ ಇವರನ್ನು ಪ್ರಶಸ್ತಿಗೆ ಅಯ್ಕೆ ಮಾಡಲಾಗಿದೆ.
ಶಿಕ್ಷಕರ ಸ್ವಗೃಹದಲ್ಲಿ ಸೆಪ್ಟೆಂಬರ್ ತಿಂಗಳ ಆಯ್ದ ದಿನಾಂಕದಂದು ವೇದಿಕೆಯ ಪ್ರಮುಖರೊಂದಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಜನನಿ ದಿವಾಕರ ಶೆಟ್ಟಿ ತಿಳಿಸಿದ್ದಾರೆ.