ಕಾರ್ಕಳ : ಉನ್ನತಿ ತಂಡದ ಮೂರನೇ ವರ್ಷದ ವಾರ್ಷಿಕ ಸಂಭ್ರಮ ಆ. 15ರಂದು ಕುಕ್ಕುಜೆ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು.
ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರಾರಂಭಗೊಂಡ ಉನ್ನತಿ ತಂಡ ಪ್ರತಿ ವರ್ಷ ಕಾರ್ಕಳ ತಾಲೂಕಿನ ಯಾವುದಾದರೂ ಒಂದು ಗ್ರಾಮೀಣ ಭಾಗದ ಸರಕಾರಿ ಶಾಲೆಗೆ ಭೇಟಿ ನೀಡಿ ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿ, ಸ್ಥಳೀಯ ಸಾಧಕರನ್ನು ಗುರುತಿಸಿ ಅವರನ್ನು ಗೌರವಿಸುವುದರೊಂದಿಗೆ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಪ್ರೋತ್ಸಾಹ ನೀಡುತ್ತಾ ಬಂದಿರುತ್ತದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಕೇಶ್ ಹೆಗ್ಡೆಯವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪ್ರಸುಧ ಶೆಟ್ಟಿ ಮಾತನಾಡಿ, ತಮ್ಮೊಂದಿಗೆ ಸಮಾಜವನ್ನು ಮುನ್ನಡೆಸಬೇಕೆಂಬ ಉನ್ನತಿ ತಂಡದ ಕಾರ್ಯವೈಖರಿ ಸಮಾಜದಲ್ಲಿ ಅಭಿನಂದನಾರ್ಹ ಎಂದು ಹರ್ಷ ವ್ಯಕ್ತಪಡಿಸಿದರು. ದಯಾನಂದ ಹೆಗ್ಡೆ ಸಂದರ್ಭೋಚಿತವಾಗಿ ಮಾತನಾಡಿದರು.
ಸನ್ಮಾನ – ವಿದ್ಯಾರ್ಥಿವೇತನ ವಿತರಣೆ
ವಿವಿಧ ಕ್ಷೇತ್ರದಲ್ಲಿ ಸಾಧನೆ್ಐದ ಸ್ಥಳೀಯ 8 ಸಾಧಕರನ್ನು ಸನ್ಮಾನಿಸಲಾಯಿತುಮ. ಕುಕ್ಕುಜೆ ಶಾಲೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡ 11 ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಇದೇ ಸಂದರ್ಭ ತಾಲೂಕಿನ 10 ಪ್ರತಿಭಾನ್ವಿತ ವಿದ್ಯಾರ್ಥಿಗಳ ಈ ವರ್ಷದ ಶೈಕ್ಷಣಿಕ ವೆಚ್ಚವನ್ನು ತಂಡ ವಹಿಸಿಕೊಂಡಿತು.
ಕಾರ್ಯಕ್ರಮದಲ್ಲಿ ಉನ್ನತಿ ತಂಡದ ಪ್ರಜ್ವಲ್ ಹಾಗೂ ಶ್ರೇಯ ಉಪಸ್ಥಿತರಿದ್ದರು. ಕೌಶಿಕ್ ಅಮೀನ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಲಾವಣ್ಯ ಪೂಜಾರಿ ಕಾರ್ಯಕ್ರಮ ನಿರೂಪಿಸಿ, ಶ್ರೇಯ ಪೂಜಾರಿ ವಂದಿಸಿದರು.
`