ಕಾರ್ಕಳ: ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಕಾರ್ಕಳ ಪೇಟೆಯಲ್ಲಿ ಚರಂಡಿಗಳಲ್ಲಿ ಹರಿಯಬೇಕಿದ್ದ ನೀರು ರಸ್ತೆಯ ಮೂಲ ಹರಿಯುತ್ತಿದ್ದು, ಪುರಸಭೆಯ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ಕಾರ್ಕಳದ ಮೂರು ಮಾರ್ಗ ಜಂಕ್ಷನ್ ಬಳಿಯ ಮಂಗಳೂರು ರಸ್ತೆಯಲ್ಲಿ ನೀರಿನ ಪ್ರವಾಹ ರಸ್ತೆಗೆ ನುಗ್ಗಿದ್ದು, ವಾಹನಗಳ ಓಡಾಟದಿಂದ ಕೆಸರು ನೀರು ನಡೆದುಕೊಂಡು ಹೋಗುವವರ ಹಾಗೂ ದ್ವಿಚಕ್ರ ವಾಹನ ಸವಾರರಿಗೆ ಎರಚುತ್ತಿದ್ದು ಜನ ಓಡಾದ ಸ್ಥಿತಿ ನಿರ್ಮಾಣವಾಗಿದೆ.ಇದರಿಂದ ಜನ ಸ್ಥಳೀಯ ಪುರಸಭೆಯ ವಿರುದ್ಧ ಆಕ್ರೊಶ ಹೊರಹಾಕಿದ್ದಾರೆ.
ಇದಲ್ಲದೇ ಮಾರ್ಕೆಟ್ ರಸ್ತೆಯ ಎಂ.ಜಿ ಎಂಟರ್ಪ್ರೆöÊಸಸ್ ಬಳಿ ಮಾರ್ಕೆಟ್ ಓಣಿಯಿಂದ ನೀರು ಮುಖ್ಯ ರಸ್ತೆಗೆ ಹರಿದು ಬರುತ್ತಿದ್ದು ಪರದಾಟ ನಡೆಸುವಂತಾಗಿದೆ. ಕಾರ್ಕಳ ಸಾಲ್ಮರದ ಗ್ಯಾಲಕ್ಷಿ ಹಾಲ್ ಬಳಿ ರಸ್ತೆಯಲ್ಲೇ ನೀರು ಹರಿಯುತ್ತಿದ್ದು ನಡೆದುಕೊಂಡು ಹೋಗುವವರಿಗೆ ಕೆಸರು ನೀರಿನ ಅಭಿಷೇಕವಾಗುತ್ತಿದೆ. ಬಂಗ್ಲೆಗುಡ್ಡೆಯ ಬಳಿ ವಿಜಯ ಬಿಲ್ಡಿಂಗ್ ಬಳಿ ರಸ್ತೆಯ ಎರಡೂ ಬದಿಯಲ್ಲಿ ಎರಡು ಅಡಿಗಳಷ್ಟು ನೀರು ನಿಂತು ವಾಹನಗಳು ಓಡಾಟಕ್ಕೂ ತೊಂದರೆಯಾಗಿದೆ.
ಕಾರ್ಕಳ ಪರಪು ಬಳಿ ನೆರೆ ನೀರು ನುಗ್ಗಿ ಜನ ಪರದಾಟ ನಡೆಸಿದ್ದು, ಜನ ಅಕಾಲಿಕ ಮಳೆಯಿಂದ ಹೈರಾಣಾಗಿದ್ದಾರೆ