

ಕಾರ್ಕಳ, ಸೆ 03: ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಬೆನ್ನುಮೂಳೆ ಮುರಿತವಾಗಿ ಬಳಿಕ ಕೋಮಾಗೆ ತಲುಪಿ ಹಾಸಿಗೆ ಹಿಡಿದಿದ್ದ ಕಾರ್ಕಳ ತಾಲೂಕಿನ ಅತ್ತೂರು ಗ್ರಾಮದ ಮಹಿಳೆ ಐಶ್ವರ್ಯ (28) ಎಂಬವರು ಮೃತಪಟ್ಟಿದ್ದಾರೆ.
ಮೃತ ಐಶ್ವರ್ಯ ಅವರು ಕಳೆದ 2025ರ ನವೆಂಬರ್ 13ರಂದು ತನ್ನ ಪತಿ ಜಗದೀಶ ಆಚಾರ್ಯ ಜೊತೆ ಸ್ಕೂಟರಿನಲ್ಲಿ ನಿಟ್ಟೆಯಿಂದ ಬೆಳ್ಮಣ್ ಮುಂಡ್ಕೂರು ಮಾರ್ಗವಾಗಿ ಕಿನ್ನಿಗೋಳಿ ಕಡೆಗೆ ಹೋಗುತ್ತಿದ್ದಾಗ ಮುಂಡ್ಕೂರು ಕಡೆಯಿಂದ ಅತೀವೇಗವಾಗಿ ಬರುತ್ತಿದ್ದ ಕಾರು ಸ್ಕೂಟರಿಗೆ ಡಿಕ್ಕಿಯಾಗಿದೆ. ಈ ಅಪಘಾತದಿಂದ ಜಗದೀಶ ಆಚಾರ್ಯಗೆ ಸಣ್ಣಪುಟ್ಟ ಗಾಯಗಳಾದರೆ, ಪತ್ನಿ ಐಶ್ವರ್ಯ ಅವರ ಕುತ್ತಿಗೆಯ ಬೆನ್ನುಹುರಿ ತುಂಡಾಗಿ ಗಂಭೀರವಾಗಿ ಗಾಯಗೊಂಡಿದ್ದರು. ಬಳಿಕ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದರೂ ಪ್ರಜ್ಞೆ ಬರದೇ ಕೋಮಾಗೆ ತಲುಪಿದ್ದರು. ನಂತರ ಒಂದೂವರೆ ತಿಂಗಳ ಬಳಿಕ ಡಿಸ್ಚಾರ್ಜ್ ಮಾಡಿ ಮನೆಯಲ್ಲಿ ಬೆಡ್ ರೀಡನ್ ಆಗಿದ್ದರು. ಬಳಿಕ ಆ 27 ರಂದು ಮತ್ತೆ ನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಅವರನ್ನು ಮತ್ತೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿ ಚಿಕಿತ್ಸೆ ಮುಂದುವರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಸೆ 3 ರಂದು ಮೃತಪಟ್ಟಿದ್ದಾರೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





.
.
.
.
.
.
.
.
.
.
.
.
.
.
.
.
.
.
.
.
