Share this news

ಮಂಡ್ಯ: ಕೃಷಿ ಸಚಿವ ಚಲುವರಾಯಸ್ವಾಮಿ ಅವರು ಮಂತ್ರಿ ಆದಾಗಿನಿಂದ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಿದ್ದಾರೆ. ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಕಾಂಗ್ರೆಸ್ ಪೇಸಿಎಂ ಅಭಿಯಾನ ಮಾಡಿ ದೊಡ್ಡ ಮಟ್ಟದ ಏಟನ್ನು ನೀಡಿತ್ತು. ಇದೀಗ ಚಲುವರಾಯಸ್ವಾಮಿಯ ಮೂಲಕ ಕಾಂಗ್ರೆಸ್‌ಗೆ ಪೆಟ್ಟು ಕೊಡಲು ಬಿಜೆಪಿ ಅಂತಹದ್ದೇ ಒಂದು ಅಭಿಯಾನಕ್ಕೆ ಮುಂದಾಗಿದೆ.


ನಾಗಮAಗಲ ಶಾಸಕ ಹಾಗೂ ಕೃಷಿ ಸಚಿವ ಸಿ.ಎಸ್.ಚಲುವರಾಯಸ್ವಾಮಿ ವಿರುದ್ಧ ಕೇಳಿಬಂದಿದ್ದ ಲಂಚ ಆರೋಪ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಕಂಡಕ್ಟರ್ ಜಗದೀಶ್ ಆತ್ಮಹತ್ಯೆ ಯತ್ನ ಪ್ರಕರಣದ ಬೆನ್ನಲ್ಲೇ ಕೃಷಿ ಇಲಾಖೆಯ ಲಂಚಕ್ಕೆ ಒತ್ತಡ ಹಾಕಿರುವ ಆರೋಪ ಕೇಳಿಬಂದಿದೆ. ಕಳೆದ ತಿಂಗಳು ಕಂಡಕ್ಟರ್ ಜಗದೀಶ್ ಆತ್ಮಹತ್ಯೆ ಯತ್ನ ಪ್ರಕರಣದ ಸಿಐಡಿ ತನಿಖೆಯನ್ನು ಚಲುವರಾಯಸ್ವಾಮಿ ಎದುರಿಸಿದ್ದರು. ಆ ಪ್ರಕರಣದಲ್ಲಿ ಚಲುವರಾಯಸ್ವಾಮಿಗೆ ಕ್ಲೀನ್‌ಚೀಟ್ ಸಿಕ್ಕಿತ್ತು. ಈ ಬೆನ್ನಲ್ಲೇ ಕೃಷಿ ಇಲಾಖೆಯ ಅಧಿಕಾರಿಗಳ ಬಳಿ ಲಂಚ ಬೇಡಿಕೆ ಆರೋಪದಡಿ ಸಿಐಡಿ ತನಿಖೆಯನ್ನು ಎದುರಿಸುತ್ತಿದ್ದಾರೆ.

ಇನ್ನೊಂದೆಡೆ ಬಿಜೆಪಿ ಪೇಸಿಎಸ್ ಎಂಬ ಅಭಿಯಾನವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುತ್ತಿದೆ. ಈ ಹಿಂದೆ ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಕಾಂಗ್ರೆಸ್ ಪೇಸಿಎಂ ಎಂಬ ಅಭಿಯಾನ ಮಾಡಿ ಬಿಜೆಪಿಗೆ ತೀವ್ರ ಮುಜುಗರ ತಂದಿತ್ತು. ಇದ್ದನ್ನೇ ಇದೀಗ ಅಸ್ತ್ರವನ್ನು ಮಾಡಿಕೊಂಡಿರುವ ಬಿಜೆಪಿ, ಸಾಮಾಜಿಕ ಜಾಲ ತಾಣದಲ್ಲಿ ಕ್ಯೂಆರ್ ಕೋಡ್ ಬಳಕೆ ಮಾಡಿಕೊಂಡು ಪೇಸಿಎಸ್ ಎಂದು ಮಾಡಿ 6 ರಿಂದ 8 ಲಕ್ಷ ರೂಪಾಯಿಯನ್ನು ಇಲ್ಲಿ ಪಡೆಯಲಾಗುತ್ತದೆ ಎಂದು ಹಾಕಲಾಗಿದೆ. ಜೊತೆಗೆ ಟ್ಯಾಗ್‌ಲೈನ್‌ನಲ್ಲಿ ಸ್ಕ್ಯಾನ್ ಮಾಡಿ ಚಲುವರಾಯಸ್ವಾಮಿಯ ಭ್ರಷ್ಟಾಚಾರ ಹೊರ ಬರುತ್ತೆ ನೋಡಿ ಎಂದು ಹಾಕಿದ್ದಾರೆ.ಅಲ್ಲದೆ ಈ ಪೇಸಿಎಸ್ ಮೂಲಕ ಕೃಷಿ ಇಲಾಖೆಯ ಟ್ರಾನ್ಸ್ ಫರ್ ಗೆ ಲಂಚ ತೆಗೆದುಕೊಳ್ಳುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಲಾಗಿದೆ.

Leave a Reply

Your email address will not be published. Required fields are marked *