ಮುಲ್ಕಿ: ಲಯನ್ಸ್ ಕ್ಲಬ್, ಲಿಯೋ ಕ್ಲಬ್ , ಯುವ ವಾಹಿನಿ ಘಟಕ ಮತ್ತು ನವದರ್ಗಾ ಯುವಕ ವೃಂದ ಕೋಟಕೇರಿ ಆಶ್ರಯದಲ್ಲಿ ಮುಲ್ಕಿ ಬಸ್ ನಿಲ್ದಾಣದ ಬಳಿ ಆಟಿಯ (ಆಷಾಡ) ಕಷಾಯ ವಿತರಣೆ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ಲಯನ್ಸ್ ಕ್ಲಬ್ ನ ವಿನೋದ್ ಸಾಲ್ಯಾನ್ ಬೆಳ್ಳಾಯರು ಮಾತನಾಡಿ ಮುಲ್ಕಿ ಪರಿಸರದ ವಿವಿಧ ಸಾಮಾಜಿಕ ಸೇವಾ ಸಂಸ್ಥೆಗಳಿಂದ ಹಿಂದಿನ ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಆಷಾಢದ ದಿನಗಳ ಮಹತ್ವದ ದಿನಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಕೆಲಸವಾಗುತ್ತಿದ್ದು ನಿರಂತರವಾಗಿ ನಡೆಯಲಿದೆ ಎಂದರು
ಈ ಸಂದರ್ಭ ಮುಲ್ಕಿ ಲಯನ್ಸ್ ಕ್ಲಬ್ ಅಧ್ಯಕ್ಷೆ ಶೀತಲ್ ಸುಶೀಲ್, ಯುವ ವಾಹಿನಿ ಅಧ್ಯಕ್ಷ ಮಾದವ ಪೂಜಾರಿ ಕಿಲ್ಪಾಡಿ, ನವದರ್ಗಾ ಯುವಕ ವೃಂದದ ಅಧ್ಯಕ್ಷ ಸತೀಶ್ ಅಂಚನ್, ಲಿಯೋ ಕ್ಲಬ್ ಸಿಯಾ ಸುಶೀಲ್, ನೀರಜ ಅಗರ್ ವಾಲ್, ಲತಾ ಶೇಖರ್,ಉದಯ ಅಮೀನ್ ಮಟ್ಟು,ಸುಜಿತ್ ಸಾಲ್ಯಾನ್, ಕಿಶೋರ್ ಶೆಟ್ಟಿ ಬಪ್ಪನಾಡು,ಧನಂಜಯ ಮಟ್ಟು, ವಿನೋದ್ ಸಾಲ್ಯಾನ್ ಬೆಳ್ಳಾಯರು, ಸತೀಶ್ ಕಿಲ್ಪಾಡಿ,ಉದಯಕುಮಾರ್ ಶೆಟ್ಟಿ ಕಾರ್ನಾಡ್ ಬೈಪಾಸ್, ಹರಿಂದ್ರ ಸುವರ್ಣ, ವಿನಯ ವಿಶ್ವನಾಥ್, ರಾಮಚಂದ್ರ ಕೋಟ್ಯಾನ್, ಜಯ ಪೂಜಾರಿ, ಚಂದ್ರಹಾಸ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು