
ಕಾರ್ಕಳ, ಏ.14: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾರ್ಕಳ ಮೈನ್ ಇಲ್ಲಿ ಮಕ್ಕಳ ಪಠ್ಯೇತರ ಚಟುವಟಿಕೆಗಳಿಗೆ ಪೂರಕವಾದ “ಕಲಾ ಸಿಂಚನ -2026 ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ನಡೆಯಿತು.
ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯ ಬಿ. ಆರ್. ಸಿ ಕೋಆರ್ಡಿನೇಟರ್ ಇಂದಿರಾ,ಇ.ಸಿ.ಒ ಬಾಲಕೃಷ್ಣ ನಾಯಕ್, ಕಾರ್ಕಳ ರೋಟರಿ ಕ್ಲಬ್ ಅಧ್ಯಕ್ಷ ರೊ.ನವೀನ್ ಚಂದ್ರ ಶೆಟ್ಟಿ ,ಎಸ್.ವಿ.ಟಿ ವನಿತಾ ಪದವಿಪೂರ್ವ ಕಾಲೇಜಿನ ಅಧ್ಯಾಪಕ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ದೇವದಾಸ್ ಕೆರೆಮನೆ, ಶಿಬಿರದ ನಿರ್ದೇಶಕ ಹಾಗೂ ಹಿರಿಯ ರಂಗಕರ್ಮಿ ಚಂದ್ರನಾಥ ಬಜಗೋಳಿ, ಹಾಗೂ ಶಿಬಿರದ ಸಂಪನ್ಮೂಲ ವ್ಯಕ್ತಿಗಳು,ಶಿಕ್ಷಕಿಯರಾದ ವಾಣಿ, ಮಧುಶ್ರೀ ಹಾಗೂ ಪೋಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಲಾ ಸಿಂಚನ ಬೇಸಿಗೆ ಶಿಬಿರದಲ್ಲಿ ಶಿಬಿರಾರ್ಥಿಗಳು ಸಿದ್ಧಪಡಿಸಿ ತಯಾರಿಸಿದ ಚಿತ್ರಕಲೆ, ಕ್ರಾಫ್ಟ್, ಮಣ್ಣಿನ ಬಣ್ಣ, ಗಿರಿಗಿಟ್ಲೆ, ಗೆರಟೆ ಕಲಾಕೃತಿ, ಚಟ್ ಪಟ್ ಚಿತ್ರ, ಮುಖವಾಡ, ಡಿಪ್ಪಿಂಗ್ ಚಿತ್ರ, ಗೀತೆ, ನಾಟಕ ಇವುಗಳನ್ನೆಲ್ಲಾ ಪ್ರದರ್ಶಿಸಲಾಯಿತು.ಈ ಸಂದರ್ಭದಲ್ಲಿ ಶಾಲೆಯ ಹಿತೈಷಿ, ಕೊಡುಗೈ ದಾನಿಯಾದ ರೊ.ನವೀನ್ ಚಂದ್ರ ಶೆಟ್ಟಿ ಹಾಗೂ ಶಿಬಿರದ ನಿರ್ದೇಶಕ ಚಂದ್ರನಾಥ ಬಜಗೋಳಿ ಇವರನ್ನು ಅಭಿನಂದಿಸಲಾಯಿತು. ಸಹಶಿಕ್ಷಕ ಶಿವಾನಂದ ಅಭಿನಂದನಾ ಮಾತುಗಳನ್ನಾಡಿದರು. ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು.
ಮುಖ್ಯ ಶಿಕ್ಷಕಿ ಶಶಿಕಲಾ ಸ್ವಾಗತಿಸಿದರು. ಗೌರವ ಶಿಕ್ಷಕಿ ಅಶ್ವಿನಿ ವಂದಿಸಿದರು. ಪದವೀಧರ ಸಹ ಶಿಕ್ಷಕಿ ಪ್ರತಿಮಾ .ಎಸ್ ನಿರೂಪಿಸಿದರು.

















.
.
.
.
.
.
.
.
.
.
