ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿರುವ ಭಾರತ ಮೂಲದ ನಾಸಾ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಹಾಗೂ ಸಹ ಗಗನಯಾತ್ರಿ ಬುಚ್ ವಿಲ್ಮೋರ್ ಭೂಮಿಗೆ ಮರಳುವ ದಿನಾಂಕ ನಿಗದಿಯಾಗಿದೆ. ತಾವು ಮತ್ತೆ ಭೂಮಿಗೆ ಕಾಲಿಡುತ್ತೀವೋ ಇಲ್ಲವೋ ಎನ್ನುವ ಆತಂಕದಲ್ಲಿದ್ದವರು ಕೊನೆಗೂ ಮರಳುವ ಮುನ್ಸೂಚನೆ ಸಿಕ್ಕಿದೆ. ನಾಸಾ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಭೂಮಿಗೆ ಮರಳಲು ಕಾತುರದಿಂದ ಕಾಯುತ್ತಿದ್ದಾರೆ.
ಎಂಟು ದಿನದ ಮಿಷನ್ಗಾಗಿ ಬೋಯಿಂಗ್ ಸ್ಟರ್ಲೈನರ್ ಕ್ಯಾಪ್ಸುಲ್ ಮೂಲಕ ಬಾಹ್ಯಾಕಾಶಕ್ಕೆ ಹಾರಿದ್ದ ಸುನೀತಾ ವಿಲಿಯಮ್ಸ್ ಹಲವು ತಾಂತ್ರಿಕ ತೊಂದರೆಗಳಿಂದ ವಾಪಸ್ ಬರಲು ಆಗಲಿಲ್ಲ. ಹಲವು ತಿಂಗಳುಗಳ ಕಾಲ ನಡೆದ ಅನೇಕ ಬೆಳವಣಿಗೆಗಳ ಬಳಿಕ ನಾಸಾ ಸ್ಪೇಸ್ ಎಕ್ಸ್ ಡ್ರಾಗನ್ ಕ್ಯಾಪ್ಸುಲ್ ಮೂಲಕ ಫೆಬ್ರವರಿಯಲ್ಲಿ ಸುನೀತಾ ವಿಲಿಯಮ್ಸ್ ಭೂಮಿಗೆ ವಾಪಸ್ ಬರಲಿದ್ದಾರೆ ಎಂದು ಹೇಳಲಾಗಿತ್ತು. ಇದೀಗ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಎಲಾನ್ ಮಸ್ಕ್ ಅವರು ಸ್ಪೇಸ್ X ಸಹಯೋಗದೊಂದಿಗೆ ಮಾರ್ಚ್ 25ರ ಒಳಗೆ ಸುನಿತಾ ವಿಲಿಯಮ್ಸ್ ಸೇಫ್ ಲ್ಯಾಂಡ್ ಆಗುವ ಸಾಧ್ಯತೆ ಇದೆ.
ಸದ್ಯ ಕಳೆದ 9 ತಿಂಗಳಿನಿಂದ ಬಾಹ್ಯಾಕಾಶದಲ್ಲಿರುವ ಈ ಇಬ್ಬರು ಭೂಮಿಗೆ ಬಂದ ಮೇಲೆ ಇಲ್ಲಿನ ವಾತಾವರಣಕ್ಕೆ ಒಡ್ಡಿಕೊಳ್ಳುವುದಕ್ಕೆ ಸಮಸ್ಯೆ ಆಗಲಿದೆ. ಇದರಿಂದ ವಿಲಿಯಮ್ಸ್, ವಿಲ್ಮೋರ್ ಇಬ್ಬರು ದೈಹಿಕ ತೊಂದರೆಗಳನ್ನ ಎದುರಿಸಲಿದ್ದಾರೆ.
ಜೊತೆಗೆ ಅವರ ದೇಹದ ಚರ್ಮ ಮೊದಲಿನಂತೆ ಇರುವುದಿಲ್ಲ. ಅದು ಸಹಜ ಸ್ಥಿತಿಗೆ ಬರಬೇಕು ಎಂದರೆ ಸಮಯ ತೆಗೆದುಕೊಳ್ಳುತ್ತದೆ. ಗಗನಯಾತ್ರಿಗಳ ದೇಹದ ಮೇಲೆ ಭೂಮಿಯ ಗುರುತ್ವಾಕರ್ಷಣೆಯ ಕೊರತೆಯಿಂದ ಮೂಳೆಯ ಸಾಂದ್ರತೆ ಮತ್ತು ಸ್ನಾಯು ಕ್ಷೀಣತೆ ಅನುಭವಿಸುತ್ತಾರೆ.ಶೂನ್ಯ ಗುರುತ್ವಾಕರ್ಷಣೆ ಮತ್ತು ಹೆಚ್ಚಿನ ವಿಕಿರಣದಲ್ಲಿ ದೀರ್ಘಕಾಲ ಬಾಹ್ಯಾಕಾಶದಲ್ಲಿ ಉಳಿಯುವುದರಿಂದ ಮೂಳೆಗಳ ದೌರ್ಬಲ್ಯ, ದೃಷ್ಟಿಯ ಮೇಲೆ ಪರಿಣಾಮ ಮತ್ತು ದೇಹದ ಸಮತೋಲನ ನಷ್ಟದಂತಹ ಸಮಸ್ಯೆಗಳು ಉಂಟಾಗಬಹುದು ಎಂಬುದು ಗಮನಿಸಬೇಕಾದ ಸಂಗತಿ. ವಿಕಿರಣವು ಕ್ಯಾನ್ಸರ್ ಮತ್ತು ನರಮಂಡಲದ ಸಮಸ್ಯೆಗಳನ್ನು ಉಂಟುಮಾಡಬಹುದು. ಅಲ್ಲದೆ, ರೋಗನಿರೋಧಕ ಶಕ್ತಿ ಕಡಿಮೆಯಾಗಬಹುದು.
ಗಗನಯಾತ್ರಿಗೆ ಭೂಮಿಗೆ ಬಂದ ಬಳಿಕ ಇಲ್ಲಿಯ ಗುರುತ್ವಾಕರ್ಷಣೆಗೆ ಒಗ್ಗಿಕೊಳ್ಳಲು ಬಾಹ್ಯಾಕಾಶ ಸಂಸ್ಥೆಗಳು ಪುನರ್ವಸತಿ ಕೇಂದ್ರ ತೆರೆಯುತ್ತವೆ. ಅದರ ಅಡಿಯಲ್ಲಿ ಹಿಂದಿರುಗುವ ಗಗನಯಾತ್ರಿಗಳಿಗೆ ಭೂಮಿ ಮೇಲೆ ಒಗ್ಗಿಕೊಳ್ಳಲು ಬೇಕಾದ ಎಲ್ಲಾ ರೀತಿಯ ಸಹಾಯ ಮಾಡಲಿದೆ. ನೆಲದ ಮೇಲೆ ನಡೆಯಲು ಸಹಾಯ, ಆಹಾರ, ಅಗತ್ಯ ಔಷಧಗಳನ್ನು ಒದಗಿಸುವುದು, ಕಾಲುಗಳನ್ನು ಬಲಪಡಿಸುವ ವ್ಯಾಯಾಮ, ಕಾಲುಗಳು ತಮ್ಮ ನಿಯಂತ್ರಣಕ್ಕೆ ಬರುವವರೆಗೂ ಮೇಲ್ವಿಚಾರಣೆ ನಡೆಯಲಿದೆ.
K