Month: April 2025

ಹವಾಮಾನ ವೈಪರೀತ್ಯ, ಉತ್ಪಾದನೆಯಲ್ಲಿ ಕುಸಿತ: ಕಾಳು ಮೆಣಸಿನ ಬೆಲೆ ಕೆಜಿಗೆ 1000 ರೂ.ಗೆ ಏರಿಕೆ ಸಾಧ್ಯತೆ

ಬೆಂಗಳೂರು: ಕಳೆದ ಎರಡು ವರ್ಷಗಳಿಂದ ಶೇಕಡ 40 ರಷ್ಟು ದರ ಏರಿಕೆ ಕಂಡಿರುವ ಕರಿಮೆಣಸು (Black pepper), ಪೂರೈಕೆ ಕೊರತೆ ಮತ್ತು ಬೇಡಿಕೆ ಹೆಚ್ಚಳದ ಪರಿಣಾಮ ಮತ್ತಷ್ಟು ದುಬಾರಿಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಕಾಳು ಮೆಣಸು ದರ ಕೆಜಿಗೆ 900…

ಜಾತಿ ಗಣತಿ ಹೆಸರಿನಲ್ಲಿ ಕಾಂಗ್ರೆಸ್ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದೆ: ಸಿದ್ದರಾಮಯ್ಯ ವಿರುದ್ಧ ಮಾಜಿ ಸಚಿವ ಸುನಿಲ್ ಕುಮಾರ್ ವಾಗ್ದಾಳಿ

ಬೆಂಗಳೂರು : ಜಾತಿ ಗಣತಿ ಹೆಸರಿನಲ್ಲಿ ಸಿಎಂ‌ ಸಿದ್ದರಾಮಯ್ಯ ಇಡೀ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ವಾಗ್ದಾಳಿ ನಡೆಸಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, 350…

ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಪತ್ರಕರ್ತ ಸಂದೀಪ್ ಪೂಜಾರಿ ನಿಧನ

ಉಡುಪಿ: ಭೀಕರ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯ ಹಾಗೂ ಈಟಿವಿ ಭಾರತ್ ಉಡುಪಿ ಜಿಲ್ಲಾ ವರದಿಗಾರ ಸಂದೀಪ್ ಪೂಜಾರಿ(37) ಚಿಕಿತ್ಸೆ ಫಲಿಸದೇ ಎ.20ರಂದು ಮುಂಜಾನೆ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ…

ಭಟ್ಕಳ: ಗರ್ಭಿಣಿ ಹಸುವಿನ ಹತ್ಯೆ ಪ್ರಕರಣ: ಓರ್ವ ಆರೋಪಿ ಬಂಧನ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಕುಕ್ಕನೀರ ವೆಂಕಟಾಪುರ ಹೊಳೆಯಲ್ಲಿ ಗರ್ಭ ಧರಿಸಿದ ಹಸುವನ್ನು ಕೊಂದು ಭ್ರೂಣವನ್ನು ಎಸೆದುಹೋದ ಪ್ರಕರಣದಲ್ಲಿ ಓರ್ವ ಆರೋಪಿಯನ್ನು ಭಟ್ಕಳ ಪೊಲೀಸರು ಬಂಧಿಸಿದ್ದಾರೆ. ಭಟ್ಕಳ ಮೂಲದ ಇಬ್ರಾಹಿಂ ಮೊಹ್ಮದ್ ಹುವಾ (45) ಬಂಧಿತ ಆರೋಪಿ. ಕುಕ್ಕನೀರ ವೆಂಕಟಾಪುರ…

ಸಿಇಟಿ ಅಭ್ಯರ್ಥಿಗಳ ಜನಿವಾರ ತೆಗೆಸಿದ ಪ್ರಕರಣ: ಸಾಯಿ ಸ್ಪೂರ್ತಿ ಕಾಲೇಜಿನ ಪ್ರಿನ್ಸಿಪಾಲ್, ಸಿಬ್ಬಂದಿ ಅಮಾನತು

ಬೆಂಗಳೂರು: ಸಿಇಟಿ ಬರೆಯಲು ಬಂದಿದ್ದ ಅಭ್ಯರ್ಥಿಯ ಜನಿವಾರ ತೆಗೆಸಿದ ಆರೋಪದಲ್ಲಿ ತಪ್ಪಿತಸ್ಥ ಅಧಿಕಾರಿಗಳು ಹಾಗೂ ಕಾಲೇಜು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ ಬೀದರ್‌ನ ಸಾಯಿ ಸ್ಪೂರ್ತಿ ಪಿಯು ಕಾಲೇಜಿನ ಪ್ರಾಂಶುಪಾಲರನ್ನು ಅಮಾನತುಗೊಳಿಸಲಾಗಿದೆ. ಈ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ವರದಿ ಸಲ್ಲಿಸಿದ್ದ ಬೀದರ್…

ಜೆ ಇ ಇ ಮೈನ್ ಫಲಿತಾಂಶದಲ್ಲಿ ಕ್ರಿಯೇಟಿವ್ ಶಿಕ್ಷಣ ಸಂಸ್ಥೆ ಅಮೋಘ ಸಾಧನೆ : 202 ವಿದ್ಯಾರ್ಥಿಗಳು ಅರ್ಹತೆ : ಮೋಹಿತ್. ಎಂ ದೇಶಕ್ಕೆ 29ನೇ ರ‍್ಯಾಂಕ್

ಕಾರ್ಕಳ: ದೇಶದ ಪ್ರತಿಷ್ಠಿತ ತಾಂತ್ರಿಕ ವಿಶ್ವವಿದ್ಯಾನಿಲಯಗಳಿಗೆ ಸೇರಬಯಸುವ ವಿದ್ಯಾರ್ಥಿಗಳಿಗೆ ನಡೆಸುವ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಜೆ ಇ ಇ ( ಮೈನ್ ) 2025 ಅರ್ಹತಾ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ 202 ವಿದ್ಯಾರ್ಥಿಗಳು ತೇರ್ಗಡೆ ಪಡೆಯುವ ಮೂಲಕ…

ಜೆ.ಇ.ಇ.ಮೈನ್ ಅಂತಿಮ ಫಲಿತಾಂಶ: ಜ್ಞಾನಸುಧಾದ 9 ವಿದ್ಯಾರ್ಥಿಗಳಿಗೆ 99ಕ್ಕಿಂತ ಅಧಿಕ ಪರ್ಸಂಟೈಲ್

ಕಾರ್ಕಳ/ಉಡುಪಿ : ರಾಷ್ಟçಮಟ್ಟದಲ್ಲಿ ಇಂಜಿನಿಯರಿAಗ್ ಪ್ರವೇಶಕ್ಕಾಗಿ ಎನ್.ಟಿ.ಎ ನಡೆಸುವ ಜೆ.ಇ.ಇ ಮೈನ್ ಪರೀಕ್ಷೆಯ 2ನೇ ಫೇಸ್‌ನ ಅಂತಿಮ ಫಲಿತಾಂಶದಲ್ಲಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ 9 ವಿದ್ಯಾರ್ಥಿಗಳು 99ಕ್ಕೂ ಅಧಿಕ ಪರ್ಸಂಟೈಲ್ ಪಡೆದಿದ್ದು, ಇಬ್ಬರು ವಿದ್ಯಾರ್ಥಿಗಳು ಭೌತಶಾಸ್ತçದಲ್ಲಿ 100 ಪರ್ಸಂಟೈಲ್ ಗಳಿಸಿದ್ದಾರೆ.…

ಹೆಬ್ರಿ: ಗ್ಯಾಸ್ ಲೀಕೆಜ್ ಅಗ್ನಿ ಅವಘಡದಿಂದ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ಮೃತ್ಯು

ಹೆಬ್ರಿ: ಮನೆಯಲ್ಲಿ ಅಡುಗೆ ಮಾಡುತ್ತಿದ್ದ ವೇಳೆ ಗ್ಯಾಸ್ ಲೀಕೆಜ್‌ನಿಂದ ಉಂಟಾದ ಅಗ್ನಿ ಅವಘಡದಿಂದ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಹೆಬ್ರಿ ನಿವಾಸಿ ಅನೂಪ (35ವರ್ಷ) ಎಂಬವರು ಮನೆಮನೆಗೆ ಗ್ಯಾಸ್ ವಿತರಣೆ ಕೆಲಸ ಮಾಡಿಕೊಂಡಿದ್ದು, ಏ.11 ರಂದು ಕೆರೆಬೆಟ್ಟು ಮಂಡಾಡಿಜೆಡ್ಡು…

ಕಾರ್ಕಳ: ತಾಲೂಕು ಸರಕಾರಿ ಆಸ್ಪತ್ರೆ,‌‌ಆರೋಗ್ಯ ಕೇಂದ್ರಗಳಿಗೆ ಅಧಿಕಾರಿಗಳ ಭೇಟಿ

ಕಾರ್ಕಳ : ತಾಲೂಕು ಸರಕಾರಿ ಆಸ್ಪತ್ರೆ, ಇರ್ವತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ನಿಟ್ಟೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಎ. 18ರಂದು ತಾಲೂಕು ಉಸ್ತುವಾರಿ ನೋಡಲ್ ಅಧಿಕಾರಿ ಅಜಯ್ ಭೇಟಿ ನೀಡಿ‌‌ ಪರಿಶೀಲನೆ ನಡೆಸಿದರು. ಈ ವೇಳೆ‌ ಸೌಲಭ್ಯಗಳು, ಸಿಬ್ಬಂದಿ ವರ್ಗ,…

ಬಪ್ಪನಾಡು ದುರ್ಗಾಪರಮೇಶ್ವರಿ ರಥೋತ್ಸವ ವೇಳೆ ಅವಘಡ: ತೇರಿನ ಮೇಲ್ಭಾಗ ಏಕಾಏಕಿ ಕುಸಿತ

ಮಂಗಳೂರು: ದುರ್ಗಾಪರಮೇಶ್ವರಿ ರಥೋತ್ಸವ ವೇಳೆ ತೇರು ಮುರಿದು ಬಿದ್ದಿರುವಂತಹ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ತಾಲೂಕಿನ ಬಪ್ಪನಾಡಿನಲ್ಲಿ ನಡೆದಿದೆ. ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ರಥೋತ್ಸವ ನಡೆಯುತ್ತಿದ್ದ ವೇಳೆ ತೇರಿನ ಮೇಲ್ಭಾಗ ಏಕಾಏಕಿ ಕುಸಿದಿದೆ. ಈ ವೇಳೆ ತೇರಿನಲ್ಲೇ ಇದ್ದ ಅರ್ಚಕರು…