ಹೆಬ್ರಿ: ಗ್ರಾಮ ವನ್ ಸೇವಾ ಕೇಂದ್ರದಲ್ಲಿ ಕೆಲಸ ಮಾಡಿಕೊಂಡಿದ್ದ ಪರಿಶಿಷ್ಟ ಪಂಗಡದ ಯುವತಿಗೆ ಸೇವಾ ಕೇಂದ್ರದ ಮಾಲಕನ ಜತೆಗೆ ಅಕ್ರಮ ಸಂಬಂಧವಿದೆ ಎನ್ನುವ ಸುಳ್ಳು ಆರೋಪ ಮಾಡಿರುವ ವಿಚಾರದಲ್ಲಿ ಮಾಲಕನ ಪತ್ನಿಯ ವಿರುದ್ಧ ಯುವತಿ ನೀಡಿರುವ ದೂರಿನ ಮೇರೆಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಜಾತಿ ನಿಂದನೆ ಪ್ರಕರಣ ದಾಖಲಾಗಿದೆ.
ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಸಂತೆಕಟ್ಟೆ ನಿವಾಸಿ ಸರಸ್ವತಿ(27) ಎಂಬವರು ಸಂತೆಕಟ್ಟೆಯ ಕಳ್ತೂರು ಪವನ್ ಕಾಮತ್ ಎಂಬವರ ಪತ್ನಿ ವಿರುದ್ಧ ಜಾತಿ ನಿಂದನೆ ದೂರು ನೀಡಿದ್ದಾರೆ. ಸರಸ್ವತಿ ಕಳೆದ 5 ವರ್ಷಗಳಿಂದ ಸಂತೆಕಟ್ಟೆ ಕಳ್ತೂರಿನಲ್ಲಿರುವ ಪವನ್ ಕಾಮತ್ ಅವರ ಗ್ರಾಮ ವನ್ ಸೇವಾ ಕೇಂದ್ರದಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡಿಕೊಂಡಿದ್ದರು. ಕಳೆದ 4 ತಿಂಗಳಿನಿAದ ಪವನ್ ಕಾಮತ್ ಪತ್ನಿ ಶ್ವೇತಾ ಕಾಮತ್ ತನ್ನ ತವರು ಮನೆಯಲಿದ್ದರು. ಇದೇ ಸಂದರ್ಭದಲ್ಲಿ ಕುಮಾರ್ ಪತ್ನಿ ಶ್ವೇತಾ ಕಾಮತ್ ಅವರು ಕಂಪ್ಯೂಟರ್ ಆಪರೇಟರ್ ಸರಸ್ವತಿ ಹಣದ ಆಸೆಗೆ ತನ್ನ ಗಂಡನ ಜತೆಗೆ ಸಂಬAಧವಿಟ್ಟುಕೊAಡಿದ್ದಾರೆ ಎನ್ನುವ ಸುಳ್ಳು ಆರೋಪ ಮಾಡಿದ್ದಾರೆ ಮಾತ್ರವಲ್ಲದೇ ಶ್ವೇತಾ ಕಾಮತ್ ಸಾರ್ವಜನಿಕವಾಗಿ ಜಾತಿ ನಿಂದನೆ ಮಾಡಿದ್ದಾರೆ ಹಾಗೂ ನಿನ್ನನ್ನು ಕಡಿದು ಕೊಲೆ ಮಾಡುತ್ತೇನೆ ಎಂದು ಕೊಲೆ ಬೆದರಿಕೆಯೊಡ್ಡಿದ್ದಾರೆ ಎಂದು ಸರಸ್ವತಿ ಹೆಬ್ರಿ ಠಾಣೆಗೆ ದೂರು ನೀಡಿದ್ದಾರೆ.












