ಕಾರ್ಕಳ: ಪಾಳುಬಿದ್ದ ಮನೆಯಲ್ಲಿ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾರ್ಕಳದ ಪೆರ್ವಾಜೆ ಸಮೀದ ಪತ್ತೊಂಜಿಕಟ್ಟೆ ಎಂಬಲ್ಲಿ ಸಂಭವಿಸಿದೆ.
ಕಾರ್ಕಳ ಕಲ್ಲೊಟ್ಟೆಯ ಪ್ರವೀಣ್ ಶೆಟ್ಟಿ ಎಂಬವರ ಪುತ್ರ ವಿನೀತ್ ಶೆಟ್ಟಿ(19) ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ಕಳೆದ ಜ.10ರಿಂದ ನಾಪತ್ತೆಯಾಗಿದ್ದ. ಇದೀಗ ಭಾನುವಾರ ಆತನ ಶವ ಪತ್ತೊಂಜಿಕಟ್ಟೆಯ ಪಾಳುಬಿದ್ದ ಮನೆಯಲ್ಲಿ ಕೊಳೆತಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ವಾತಿ ಎಂಬವರಿಗೆ ಸೇರಿದ್ದ ಮನೆಯಲ್ಲಿ ಈತ ಆತ್ಮಹತ್ಯೆ ಮಾಡಿಕೊಂಡಿದ್ದು, ಸ್ವಾತಿಯವರು ಕಳೆದ ಜ.3ರಂದು ತನ್ನ ಮನೆಗೆ ಬಂದು ಬಳಿಕ ಬೀಗ ಹಾಕಿ ಸಾನೂರಿನ ತನ್ನ ವಾಸದ ಮನೆಗೆ ತೆರಳಿದ್ದರು. ಈ ನಡುವೆ ವಿನೀತ್ ನಾಪತ್ತೆಯಾಗಿದ್ದು, ಆತ ಸ್ವಾತಿ ಅವರಿಗೆ ಸೇರಿದ್ದ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿನೀತ್ ಶೆಟ್ಟಿ ತನ್ನ ಅಜ್ಜನ ಮನೆಯಲ್ಲಿ ವಾಸವಿದ್ದು ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ






