Share this news

ಕಾರ್ಕಳ: ಶಾಲೆಯ ಬಿಸಿಯೂಟದಲ್ಲಿ ಕಲ್ಲು ಸಿಕ್ಕಿದ ಕಾರಣಕ್ಕೆ ಅಕ್ಷರ ದಾಸೋಹ ಅಧಿಕಾರಿ ಹಾಗೂ ಮುಖ್ಯ ಶಿಕ್ಷಕಿ ಅಡುಗೆ ಸಹಾಯಕಿಗೆ ನಿಂದಿಸಿರುವ ಪ್ರಕರಣ ಕಾರ್ಕಳ ತಾಲೂಕಿನ ಬೈಲೂರು ಸರಕಾರಿ ಹಿರಿಯ ಪ್ರಾಥಮಿಕ ಮೈನ್ ಶಾಲೆಯಲ್ಲಿ ನಡೆದಿದೆ.

ಕೌಡೂರು ಗ್ರಾಮದ ರಾಜೀವಿ (59) ಎಂಬವರು ಸ.ಹಿ.ಪ್ರಾ. ಬೈಲೂರು ಮೈನ್ ಶಾಲೆಯಲ್ಲಿ 20 ವರ್ಷಗಳಿಂದ ಅಡುಗೆ ಸಹಾಯಕಿಯಾಗಿ ಕರ್ತವ್ಯ ಮಾಡಿಕೊಂಡಿದ್ದು, ಫೆ 16ರಂದು ರಂದು ಅಕ್ಷರ ದಾಸೋಹದ ಊಟದಲ್ಲಿ ಮಕ್ಕಳಿಗೆ ಕಲ್ಲು ಸಿಕ್ಕಿದ್ದು ಅದರ ಬಗ್ಗೆ ವಿದ್ಯಾರ್ಥಿಗಳ ಪೋಷಕರು ಈ ಬಗ್ಗೆ ಎಸ್‌ಡಿಎಮ್‌ಸಿಯವರಿಗೆ ದೂರು ನೀಡಿದ್ದು ಎಸ್‌ಡಿಎಮ್‌ಸಿ ಮಂಡಳಿಯ ಸದಸ್ಯರು ಕರೆದು ಬುದ್ಧಿವಾದ ಹೇಳಿದ್ದರು. ಆದರೆ ತಣ್ಣಗಾಗಿದ್ದ ಇದೇ ವಿವಾದವು ಮತ್ತೆ ಮುನ್ನಲೆಗೆ ಬಂದಿದ್ದು ಫೆ.17ರಂದು ಅಕ್ಷರ ದಾಸೋಹ ಇಲಾಖಾಧಿಕಾರಿ ಹಾಗೂ ಶಾಲಾ ಮುಖ್ಯ ಶಿಕ್ಷಕಿ ಸುಮಾದೇವಿ ಅವರು ರಾಜೀವಿ ಅವರನ್ನು ಹೊಣೆಗಾರರಾಗಿಸಿ ಬೈದು ನಿಂದಿಸಿದ್ದಾರೆ ಎಂದು ರಾಜೀವಿ ಕಾರ್ಕಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ

Leave a Reply

Your email address will not be published. Required fields are marked *