ಕಾರ್ಕಳ: ಎಣ್ಣೆಹೊಳೆ ಹಂಚಿಕಟ್ಟೆ ಶ್ರೀ ಮಹಾಮ್ಮಾಯಿ ದೇವಸ್ಥಾನದ ಬ್ರಹ್ಮಕಲಶೋತ್ಸವ ,ವರ್ಧಂತ್ಯುತ್ಸವ ಹಾಗೂ ಭಜನಾ ಮಂಗಲೋತ್ಸವವು ಫೆಬ್ರವರಿ 21 ರಿಂದ24 ರವರೆಗೆ ನಡೆಯಲಿದ್ದು,ಮಂಗಳವಾರ ಹೊರೆಕಾಣಿಕೆ ಮೆರವಣಿಗೆ ಮೂಲಕ ಹಸಿರುವಾಣಿಯನ್ನು ದೇವರಿಗೆ ಸಮರ್ಪಿಸಲಾಯಿತು.
ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸಾಧು.ಟಿ ಶೆಟ್ಟಿ ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾದ ವೇದ ಮೂರ್ತಿ ಅರುಣ್ ಭಟ್, ಸುನಿಲ್ ಭಟ್,ನಿವೃತ್ತ ಪ್ರಾಂಶುಪಾಲ ವೈ.ಪಾಂಡುರಂಗ ನಾಯಕ್, ಆಡಳಿತ ಮೊಕ್ತೇಸರ ಪರಮೇಶ್ವರಯ್ಯ, ಉತ್ಸವ ಸಮಿತಿ ಅಧ್ಯಕ್ಷ ಸುರೇಂದ್ರ ಶೆಟ್ಟಿ, ದೇವಸ್ಥಾನದ ವ್ಯವಸ್ಥಾಪಕ ಶ್ಯಾಮ ನಾಯ್ಕ್, ಕಾರ್ಯದರ್ಶಿಗಳಾದ ಸಂತೋಷ್ ಜೈನ್, ಕಿಶೋರ್ ನಾಯ್ಕ್,ಸದಾನಂದ ನಾಯ್ಕ್, ರಾಜೇಂದ್ರ ಮುಂತಾದವರು ಉಪಸ್ಥಿತರಿದ್ದರು.
ಎಣ್ಣೆಹೊಳೆ ಜಯರಾಮ ಭಟ್ ಸಭಾಭವನದಿಂದ ದೇವಸ್ಥಾನಕ್ಕೆ ಹೊರಟ ಹೊರೆಕಾಣಿಕೆ ಮೆರವಣಿಗೆಯಲ್ಲಿ ಸ್ಥಳೀಯ ಭಜನಾ ತಂಡಗಳು, ಚಂಡೆ ಬಳಗ ಹಾಗೂ ಭಕ್ತಾದಿಗಳು ಭಾಗವಹಿಸಿದ್ದರು.