ಕಾರ್ಕಳ: ಕಳೆದ ಒಂದು ವಾರದಿಂದ ನೀರಸವಾಗಿದ್ದ ಮಳೆ ಶನಿವಾರ ಮುಂಜಾನೆಯಿಂದ ಬಿರುಸುಗೊಂಡಿದ್ದು, ಮುಂಜಾನೆಯಿಂದ ಸುರಿಯುತ್ತಿರುವ ಭಾರೀ ಮಳೆಗೆ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ಹಲವೆಡೆ ಗಾಳಿ ಮಳೆಯಿಂದ ಹಾನಿ ಸಂಭವಿಸಿದೆ.
ಕಾರ್ಕಳ ತಾಲೂಕಿನ ಮಿಯ್ಯಾರು ಗ್ರಾಮದ ಜೋಡುಕಟ್ಟೆ ಎಂಬಲ್ಲಿನ ನಿವಾಸಿ ಜನಾರ್ಧನ ಭಟ್ ಎಂಬವರ ಮನೆಗೆ ಮರ ಬಿದ್ದು ಸುಮಾರು 10 ಸಾವಿರ ನಷ್ಟ ಸಂಭವಿಸಿದೆ.
ನಿಟ್ಟೆ ಬಜಕಳ ಎಂಬಲ್ಲಿ ಭಾರೀ ಗಾಳಿಮಳೆಗೆ ಕರುಣಾಕರ ಶೆಟ್ಟಿ ಎಂಬವರ ಮನೆ ಹಾಗೂ ಕೊಟ್ಟಿಗೆಯ ಮೇಲ್ಛಾವಣಿಯ ಹೆಂಚು ಹಾರಿಹೋಗಿ ಸುಮಾರು 60 ಸಾವಿರ ನಷ್ಟ ಸಂಭವಿಸಿದೆ.
ತಾಲೂಕಿನ ವಿವಿದೆಡೆ ಉತ್ತಮ ಮಳೆಯಾಗಿದ್ದು,ಕೆದಿಂಜೆಯಲ್ಲಿ ಗರಿಷ್ಠ 63 ಮಿ.ಮೀ ಮುಳಿಕಾರು 54.60, ಕೆರ್ವಾಶೆ 45.20 ಕಾರ್ಕಳ ಹಾಗೂ ಇರ್ವತ್ತೂರು ಕನಿಷ್ಠ 21.60 ಮಳೆಯಾಗಿದೆ











