ಉಡುಪಿ: ಅಭಿವೃದ್ದಿ ವಿಚಾರದಲ್ಲಿ ವಿನಾಕಾರಣ ಅಡ್ಡಗಾಲು ಹಾಕಿ ಇದೀಗ ಪರಶುರಾಮನ ವಿಚಾರದಲ್ಲಿ ಗೊಂದಲ ಸೃಷ್ಟಿಸಿ ಜನರಲ್ಲಿ ಗೊಂದಲ ಮೂಡಿಸುತ್ತಿರುವ ಉದಯ ಶೆಟ್ಟಿಯವರೇ ನೀವು ಸುಮ್ಮನಿದ್ದರೆ ಸರಿ ಇಲ್ಲವಾದಲ್ಲಿ ನಿಮ್ಮ ಬಾಲ ಕಟ್ ಮಾಡಲು ಗೊತ್ತಿದೆ ಎಂದು ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಮಹಾವೀರ್ ಹೆಗ್ಡೆ ವಾಗ್ದಾಳಿ ನಡೆಸಿದ್ದಾರೆ.
ಅವರು ಸೋಮವಾರ ಕಾರ್ಕಳ ಬಿಜೆಪಿ ವತಿಯಿಂದ ಉಡುಪಿಯಲ್ಲಿ ಪರಶುರಾಮ ಥೀಮ್ ಪಾರ್ಕ್ ಕಾಂಗ್ರೆಸ್ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ವಾಗ್ದಾಳಿ ನಡೆಸಿ, ಪರಶುರಾಮ ಥೀಂ ಪಾರ್ಕ್ ವಿಚಾರದಲ್ಲಿ ನೀವು ಆಟಾಟೋಪ ಪ್ರದರ್ಶಿಸಿದರೆ ನಿಮ್ಮ ಮನೆಗೆ ಮುತ್ತಿಗೆ ಹಾಕಲಾಗುವುದು, ಅಂದು ಫೈಬರ್ ಮೂರ್ತಿ ಎಂದವರು ಈಗ ಕಂಚಿನ ಮೂರ್ತಿ ಬಂದಿದೆ ಎನ್ನುತ್ತೀರಿ, ಹಾಗಾದರೆ ಇದು ನಿಮ್ಮಪ್ಪನ ಮನೆಯಿಂದ ಅಥವಾ ಯಾರಪ್ಪನ ಮನೆಯಿಂದ ಬಂತು? ಈ ಗೊಂದಲದ ಹೇಳಿಕೆ ನಿಲ್ಲಿಸಿ, ನಮ್ಮಿಂದ ತಪ್ಪಾಗಿದೆ ಎಂದು ಒಪ್ಪಿಕೊಳ್ಳಿ, ಇಲ್ಲವಾದಲ್ಲಿ ಬಾಲ ಕಟ್ ಮಾಡಲು ಬಿಜೆಪಿಯವರಿಗೆ ಗೊತ್ತಿದೆ ಎಂದು ತಿರುಗೇಟು ನೀಡಿದರು.
ಈ ವಿಚಾರದಲ್ಲಿ ನೀವು ಎಷ್ಟೇ ಗೊಂದಲ ಸೃಷ್ಟಿಸಿದರೂ ಸರಿ ಸುನಿಲ್ ಕುಮಾರ್ ಅವರ ಕಾರ್ಕಳದ ಅಭಿವೃದ್ಧಿಯನ್ನು ನಿಮ್ಮಿಂದ ತಡೆಯಲು ಸಾಧ್ಯವಿಲ್ಲ, ನೀವು ಎಷ್ಟೇ ಹೈಕೋರ್ಟಿಂದ ತಡೆಯಾಜ್ಞೆ ತಂದರೂ ನಿಮ್ಮಿಂದ ಅಭಿವೃದ್ಧಿ ತಡೆಯಲು ಸಾಧ್ಯವಿಲ್ಲ ಎಂದು ಮಹಾವೀರ್ ಹೆಗ್ಡೆ ಸವಾಲು ಎಸೆದರು.
ಬಳಿಕ ಎಸ್ಪಿ ಡಾ.ಅರುಣ್ ಕುಮಾರ್ ಅವರಿಗೆ ಕಾಂಗ್ರೆಸ್ ವಿರುದ್ಧ ದೂರು ನೀಡಿದರು
`