Share this news

ಕಾರ್ಕಳ : ತಾಲೂಕಿನ ಮಿಯ್ಯಾರಿನಲ್ಲಿ ಟೆಂಪೋ ಹಾಗೂ ಬೈಕ್ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ದಾರುಣವಾಗಿ ಮೃತಪಟ್ಟಿದ್ದಾರೆ.
ಮಿಯ್ಯಾರು ನಿವಾಸಿ ಕಾಶಿನಾಥ್  (38ವ) ಮೃತಪಟ್ಟವರು.

ಅವರು ಸೋಮವಾರ (ಆಗಸ್ಟ್.5) ರಾತ್ರಿ ಸುಮಾರು 9 ಗಂಟೆಯ ವೇಳೆಗೆ ಹಾಳೆಕಟ್ಟೆಯಲ್ಲಿರುವ ತಮ್ಮ ಸಲೂನ್ ಅಂಗಡಿ ಮುಚ್ಚಿ ಮನೆಗೆ ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಕಾಶಿನಾಥ್ ಅವರು ನಲ್ಲೂರು ಬಸದಿ ಬಳಿ ತಿರುವಿನಲ್ಲಿ ಮನೆಗೆ ಹೋಗುವ ರಸ್ತೆಗೆ ಬೈಕ್ ತಿರುಗಿಸಿದಾಗ ಎದುರಿನಿಂದ ವೇಗವಾಗಿ ಬಂದ ಟೆಂಪೊ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಗಂಭಿರವಾಗಿ ಗಾಯಗೊಂಡ ಅವರನ್ನು ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದೊಯ್ದು ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಕಾಶಿನಾಥ್ ಮೃತಟ್ಟಿದ್ದರು.

ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಕಾಶಿನಾಥ್ ತಾಯಿ,ಇಬ್ಬರು ಸಹೋದರರು ಹಾಗೂ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.

                        

                          

                        

                          

 

`

Leave a Reply

Your email address will not be published. Required fields are marked *