Share this news

ಕಾರ್ಕಳ: ರೋಟರಿ ಕ್ಲಬ್ ಕಾರ್ಕಳ ಇದರ ವತಿಯಿಂದ ದಾನಿಗಳ ನೆರವಿನಿಂದ ಹೊಸ ಬೆಳಕು ಆಶ್ರಮಕ್ಕೆ 1 ಲಕ್ಷ ರೂಪಾಯಿಗಳ ಧನಸಹಾಯವನ್ನು ನೀಡಲಾಯಿತು.ಇದರ ಜತೆಗೆ ಡೈಪರ್, ಹಣ್ಣು ಹಂಪಲು ತಿಂಡಿ ತಿನಿಸುಗಳು ಹಾಗೂ 50 ಕುರ್ಚಿಗಳನ್ನು ಕೊಡುಗೆಯಾಗಿ ನೀಡಲಾಯಿತು.

ಈ ಸಂದರ್ಭದಲ್ಲಿ ಹೊಸ ಬೆಳಕು ಆಶ್ರಮದ ವ್ಯವಸ್ಥಾಪಕಿ ತನುಲಾ ಅವರಿಗೆ ರೋಟರಿ ಜಿಲ್ಲಾ ಮಾಜಿ ಗವರ್ನರ್ ಡಾ. ಭರತೇಶ್ ಆದಿರಾಜರವರು 1 ಲಕ್ಷ ರೂಪಾಯಿಗಳ ಧನಸಹಾಯವನ್ನು ಹಸ್ತಾಂತರಿಸಿದರು ಹಾಗೂ ದಿನಸಿ ಸಾಮಾಗ್ರಿಗಳು ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳನ್ನು ಆಶ್ರಮಕ್ಕೆ ಹಸ್ತಾಂತರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಇಕ್ಬಾಲ್ ಅಹಮದ್ ಕಾರ್ಯದರ್ಶಿ ಗಣೇಶ್ ಸಾಲ್ಯಾನ್ ಮಾಜಿ ಅಧ್ಯಕ್ಷರುಗಳಾದ ಶೈಲೇಂದ್ರ ರಾವ್, ಮೋಹನ್ ಪಡಿವಾಳ್, ಹರಿಪ್ರಕಾಶ್ ಶೆಟ್ಟಿ, ಹಿತೈಷಿ ಕಾರ್ಕಳ ಇದರ ಅಧ್ಯಕ್ಷರಾದ ಗಣಪತಿ ಕಾಮತ್ ಉದ್ಯಮಿಗಳಾದ ಅರುಣ್ ಪುರಾಣಿಕ್, ಚೇತನ್ ನಾಯಕ್ ಹಾಗೂ ಚಂದ್ರಶೇಖರ್ ಮಾಡ, ಹರಿಪ್ರಕಾಶ್ ಶೆಟ್ಟಿ ,ವೃಂದಾ ಶೆಟ್ಟಿ, ಮೋಹನ್ ಪಡಿವಾಳ, ಸುವರ್ಣ ನಾಯಕ್ ,ಮಮತಾ ಶೆಟ್ಟಿ ಮತ್ತು ಬಾಲಕೃಷ್ಣ ದೇವಾಡಿಗ ಉಪಸ್ಥಿತರಿದ್ದರು


                        

                          

                        

                          

 

`

Leave a Reply

Your email address will not be published. Required fields are marked *