ಕಾರ್ಕಳ: ಮಾಧವ ಕಾಮತ್ ಮಿಯ್ಯಾರು ಇವರಿಗೆ 75 ನೇ ಜನ್ಮದಿನದ ಅಂಗವಾಗಿ ಅಭಿನಂದನಾ ಸಮಾರಂಭ ಮಿಯ್ಯಾರು ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.
ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ವತಿಯಿಂದ ಮಾಧವ ಕಾಮತ್ ಮತ್ತು ವಂದನಾ ಕಾಮತ್ ದಂಪತಿಯನ್ನು ಅಭಿನಂದಿಸಲಾಯಿತು. ಹಾಗೂ ಅವರ ಅಭಿಮಾನಿಗಳು ವಿಶೇಷ ಉಡುಗೊರೆಗಳನ್ನು ನೀಡಿ ಅಭಿನಂದಿಸಿದರು. ಮಾಧವ ಕಾಮತ್ ಮಿಯ್ಯಾರು ಇವರ ಮೊಮ್ಮಗ ಮಾ.ಅಥಾರ್ವ ನ ಐದನೇ ವರ್ಷದ ಜನ್ಮದಿನಾಚರಣೆಯನ್ನು ಇದೇ ವೇದಿಕೆಯಲ್ಲಿ ಆಚರಿಸಲಾಯಿತು.ಮಾಧವ ಕಾಮತ್ ರ ಸೋದರ ಮಾವ 88ನೇ ವರ್ಷದ ಗೋವಿಂದರಾಯ ಕಿಣಿ ಅವರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಮಿಯ್ಯಾರು ಇವರ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗಣಪತಿ ಹೆಗ್ಡೆ ವಹಿಸಿದ್ದರು.
ಮಾಧವ ಕಾಮತರ ಅಭಿಮಾನಿಗಳಾದ ರಾಮಚಂದ್ರ ನೆಲ್ಲಿಕಾರ್, ಸತ್ಯೇಂದ್ರ ನಾಯಕ್, ಶ್ಯಾಮ್ ಎನ್ ಶೆಟ್ಟಿ, ರಜನಿ ಕಾಮತ್ ತೀರ್ಥಹಳ್ಳಿ, ಹರಿಹರ ಗೋಖಲೆ, ಅಂಡಾರು ಮಹಾವೀರ ಹೆಗ್ಡೆ, ಕಿಶೋರ್ ಶೆಟ್ಟಿ , ಶೇಕ್ ಶಬ್ಬೀರ್, ರಾಜೇಶ್ ನೆಲ್ಸನ್, ಸುಕೀರ್ತಿ ಶೆಟ್ಟಿ ಮೊದಲಾದವರು ಕಾಮತರ ಕಾರ್ಯ ಚಟುವಟಿಕೆಗಳ ಬಗ್ಗೆ ಅನಿಸಿಕೆಯನ್ನು ಹಂಚಿಕೊಂಡು ಅಭಿನಂದಿಸಿದರು. ಸುರೇಖಾ ಶ್ರೀಯುತರ ಬಗ್ಗೆ ಕವನವನ್ನು ವಾಚಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಸ್ ವಿ ಎಜ್ಯುಕೇಶನ್ ಟ್ರಸ್ಟ್ ರಿ. ಕಾರ್ಕಳ ಇದರ ಕಾರ್ಯದರ್ಶಿ ಕೆ.ಪಿ.ಶೆಣೈ , ಉಪಾಧ್ಯಕ್ಷರಾದ ಖ್ಯಾತ ಲೆಕ್ಕ ಪರಿಶೋಧಕ ಕಾರ್ಕಳ ಕಮಲಾಕ್ಷ ಕಾಮತ್, ಖ್ಯಾತ ನ್ಯಾಯವಾದಿ ಮಣಿರಾಜ್ ಶೆಟ್ಟಿ , ಉದ್ಯಮಿ ಕೃಷ್ಣ ಮೂರ್ತಿ, ಅಭಿನಂದನಾ ಮಾತುಗಳನ್ನಾಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಾಧವ ಕಾಮತರ ಕುಟುಂಬಸ್ಥರು, ಹಿತೈಷಿಗಳು, ಊರ ಪರವೂರಿನ ಬಂಧುಗಳು ಉಪಸ್ಥಿತರಿದ್ದರು.
ಯಶಸ್ವಿ ಟುಟೋರಿಯಲ್ ಕಾಲೇಜಿನ ಪ್ರಾಚಾರ್ಯರಾದ ಗಣೇಶ್ ಕಾಮತ್ ಸ್ವಾಗತಿಸಿದರು. ಎಸ್ ವಿ ಟಿ ವನಿತಾ ಪದವಿಪೂರ್ವ ಕಾಲೇಜಿನ ಅಧ್ಯಾಪಕ ದೇವದಾಸ್ ಕೆರೆಮನೆ ನಿರೂಪಿಸಿ, ವಂದಿಸಿದರು.
























`
