ಕಾರ್ಕಳ: ಮಾನವ ಹಕ್ಕು ಹಾಗೂ ಧಾರ್ಮಿಕ ಸಾಮರಸ್ಯ ಮತ್ತು ಐಕ್ಯೂಎಸಿ ಘಟಕ ಇದರ ವತಿಯಿಂದ ಕಾರ್ಕಳ ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಮಾನವ ಹಕ್ಕು ಹಾಗೂ ಧಾರ್ಮಿಕ ಸಾಮರಸ್ಯ ಘಟಕದ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅಡ್ವೊಕೇಟ್ ಸದಾನಂದ ಸಾಲ್ಯಾನ್ ಮಾತನಾಡಿ, ಮನುಷ್ಯ ಸಂಘ ಜೀವಿಯೂ ಹೌದು, ಸಂಘರ್ಷ ಜೀವಿಯೂ ಹೌದು. ನೈತಿಕ,ಭೌತಿಕ,ಹಾಗೂ ಆಧ್ಯಾತ್ಮಿಕ ಜೀವನಕ್ಕೆ ಮಾನವ ಹಕ್ಕುಗಳು ಅತ್ಯಮೂಲ್ಯ ವಿದ್ಯಾರ್ಥಿಗಳಿಗೆ ಮಾನವ ಹಕ್ಕುಗಳ ಬಗೆಗಿನ ಅರಿವಿರಬೇಕು ಎನ್ನುತ್ತಾ ಮಾನವ ಹಕ್ಕುಗಳ ಇತಿ ಮಿತಿಯ ಬಳಕೆಯ ಕುರಿತು ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಚಾರ್ಯರಾದ ಡಾ.ಮಂಜುನಾಥ ಎ.ಕೋಟ್ಯಾನ್ ಮಾತನಾಡಿ, ಮಾನವ ಹಕ್ಕುಗಳು ಅಗತ್ಯ ಅನ್ನುವುದು ಹೌದಾದರೂ ಅದನ್ನು ದುರ್ಬಳಕೆ ಮಾಡದೆ,ಬದುಕನ್ನು ನಡೆಸುವ ದಾರಿಯನ್ನು ಕಂಡುಕೊಳ್ಳಬೇಕು.ಕಾನೂನಿನ ಅರಿವು ಸರಿಯಾಗಿ ಇದ್ದವರು ಅದನ್ನು ಸದ್ಬಳಕೆ ಮಾಡಿಯೇ ಮಾಡುತ್ತಾರೆ ಎಂದರು.
ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಯಾದ ಪ್ರೊ.ದತ್ತಾತ್ರೇಯ ಮಾರ್ಪಳ್ಳಿ,ಐಕ್ಯೂಎಸಿ ನಿರ್ದೇಶಕರಾದ ಪ್ರೊ.ನಾಗಭೂಷಣ್,ಘಟಕದ ಸಂಯೋಜಕರಾದ ಶ್ರೀಮತಿ ಸುಚಿತ್ರಾ,ಘಟಕದ ಕಾರ್ಯದರ್ಶಿಗಳಾದ ಕು.ಶ್ವೇತಾ ಹಾಗೂ ಸುಬ್ರಮಣ್ಯ ಉಪಸ್ಥಿತರಿದ್ದರು.
ಶ್ರೀಮತಿ ಸುಚಿತ್ರಾ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಆರಿನ್ ಸ್ವಾಗತಿಸಿ,ಶ್ವೇತಾ ವಂದಿಸಿದರು. ವಿಯೋಲಾ ಕಾರ್ಯಕ್ರಮ ನಿರೂಪಿಸಿದರು.














