ಕಾರ್ಕಳ : ಪ್ರತ್ಯೇಕ ಪ್ರಕರಣಗಳಲ್ಲಿ ಕಾರ್ಕಳ ಮತ್ತು ಹೆಬ್ರಿ ತಾಲೂಕಿನಲ್ಲಿ ಇಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹೆಬ್ರಿಯ ನಾಡ್ಪಾಲು ಎಂಬಲ್ಲಿ ಶೀನಾ (73) ಎಂಬವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇವರು ಕೃಷಿ ಕೆಲಸ ಮಾಡಿಕೊಂಡಿದ್ದು, ಸುಮಾರು 3 ವರ್ಷಗಳ ಹಿಂದೆ ಮರದಿಂದ ಬಿದ್ದು ಗಾಯಗೊಂಡು ಚಿಕಿತ್ಸೆ ಪಡೆದಿದ್ದರು. ಅಲ್ಲದೇ ಅವರಿಗೆ ಅಧಿಕ ರಕ್ತದೊತ್ತಡ ಖಾಯಿಲೆ ಇದ್ದು ಔಷಧಿ ಪಡೆಯುತ್ತಿದ್ದರು. ಅನಾರೋಗ್ಯ ವಿಚಾರದಲ್ಲಿ ಮನನೊಂದಿದ್ದ ಅವರು ಜೀವನದಲ್ಲಿ ಜಿಗುಪ್ಸೆಗೊಂಡು ಸೆ. 18 ರಂದು ನಾಡ್ಪಾಲು ಗ್ರಾಮದ ಸೊಮೇಶ್ವರ, ಬೈದ ಬೆಳಾರ್ ಎಂಬಲ್ಲಿ ತಮ್ಮದೇ ತೋಟದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ಮೊಂದೆಡೆ ಕಾರ್ಕಳ ತಾಲೂಕು ಬೇಲಾಡಿ ನಡುಮನೆ ಎಂಬಲ್ಲಿ ಲಾಯ್ಸನ್ ನೊವೆಲ್ ಡಿಸೋಜ(39) ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇವರಿಗೆ ಕುಡಿತದ ಚಟ ಇದ್ದು, ಪಿಡ್ಸ್ ಖಾಯಿಲೆಯಿಂದ ಬಳಲುತ್ತಿದ್ದರು. ಮನೆಯಲ್ಲಿ ಒಬ್ಬಂಟಿಗನಾಗಿರುವುದರಿಂದ ಮನನೊಂದು ಸೆ. 17 ರಂದು ರಾತ್ರಿ ತಮ್ಮ ಮನೆಯ ಬಾತ್ ನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.









in 






