ಉಪ್ಪಿನಂಗಡಿ : ನೆಕ್ಕಿಲಾಡಿ ಗ್ರಾಮದ ನೆಕ್ಕಳ ಎಂಬಲ್ಲಿ ರಸ್ತುಂ ಖಾನ್ ಗೆ ಸೇರಿದ ಜಮೀನಿನಲ್ಲಿ ಗೋವುಗಳನ್ನು ಅಕ್ರಮವಾಗಿ ವಧೆ ಮಾಡುವ ಅಡ್ಡೆಗೆ ಉಪ್ಪಿನಂಗಡಿ ಪೋಲಿಸರು ದಾಳಿ ನಡೆಸಿದ್ದಾರೆ.
ಆರೋಪಿಗಳು ಗೋವಧೆ ಮಾಡಿ, ಮಾಂಸ ಮಾಡುತ್ತಿದ್ದರು ಎನ್ನುವ ಖಚಿತ ಮಾಹಿತಿ ಮೇರೆಗೆ ಖಡಕ್ ಅಧಿಕಾರಿ, ಎಸ್‌ಐ ಅವಿನಾಶ್ ಹೆಚ್. ಗೌಡ ನೇತೃತ್ವದಲ್ಲಿ ಪೋಲಿಸರು ದಾಳಿ ನಡೆಸಿದ್ದಾರೆ.
ದಾಳಿಯ ಸಂದರ್ಭದಲ್ಲಿ ಆರೋಪಿಗಳು ಪರಾರಿಯಾಗಿದ್ದು, ಆರೋಪಿಗಳಾದ ರಫೀಕ್, ನಝೀರ್, ಉಬೈದ್ , ಅಶ್ರಫ್ ಹಾಗೂ ನಿಝಾಮುದ್ದೀನ್ ಮೇಲೆ ಉಪ್ಪಿನಂಗಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳ ಪತ್ತೆಗೆ ಪೋಲಿಸರು ಬಲೆಬೀಸಿದ್ದು, ಪತ್ತೆಗೆ ವಿಶೇಷ ತಂಡ ರಚಿಸಿ, ಶೋಧ ಕಾರ್ಯ ಆರಂಭಿಸಿದ್ದಾರೆ.







in 
