ಕಾರ್ಕಳ: ವ್ಯಕ್ತಿಯೊಬ್ಬರ ಎಟಿಎಂ ಕಾರ್ಡನ್ನು ಬದಲಿಸಿದ ದುಷ್ಕರ್ಮಿಗಳು ರೂ.70,000 ರೂ. ವಂಚಿಸಿರುವ ಘಟನೆ ಕಾರ್ಕಳದಲ್ಲಿ ಸೆ.16 ರಂದು ನಡೆದಿದೆ.
ಕುಕ್ಕುಂದೂರಿನ ರಫೀಕ್ ಆಹ್ಮದ್ (66) ಅವರು ಸೆ. 16 ರಂದು ಪತ್ನಿ ಸಮೀನಾ ಬೇಂಗಂ ಅವರ ಕೆನರಾ ಬ್ಯಾಂಕ್ ಕಾರ್ಕಳ ಶಾಖೆಯ ಎಟಿಎಂ ನಿಂದ ಹಣ ಪಡೆಯಲು ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ಜೋಡುರಸ್ತೆ ಎಂಬಲ್ಲಿ ಇರುವ ಬ್ಯಾಂಕ್ ಆಫ್ ಬರೋಡಾ ಎಟಿಎಮ್ನಿಂದ ಹಣ ತೆಗೆಯಲು ಹೋದಾಗ ಅಲ್ಲಿ ಎರಡು ಜನ ಅಪರಿಚಿತ ವ್ಯಕ್ತಿಗಳು ಇದ್ದರು.
ಹಣ ಡ್ರಾ ಮಾಡಲು ಬಂದಿದ್ದ ರಫೀಕ್ ಗಮನವನ್ನು ಬೇರೆಡೆ ಸೆಳೆದ ಅವರು ಎಟಿಎಮ್ ಕಾರ್ಡನ್ನು ಬದಲಾವಣೆ ಮಾಡಿ ಕಾರ್ಕಳ ಬಂಡೀಮಠದಲ್ಲಿರುವ ಫೆಡರಲ್ ಬ್ಯಾಂಕ್ ಎಟಿಎಮ್ನಿಂದ 70,000/- ರೂ. ಡ್ರಾ ಮಾಡಿ ವಂಚನೆ ಎಸಗಿದ್ದಾರೆ.
ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. .







in 
