Share this news

ಕಾರ್ಕಳ :ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಕಳ್ಳರು ಮನೆಯೊಳಗೆ ನುಗ್ಗಿ ಕಪಾಟಿನಲ್ಲಿರಿಸಿದ್ದ ಸುಮಾರು2 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕಳವುಗೈದ ಘಟನೆ ಕಾರ್ಕಳ ತಾಲೂಕಿನ ಶಿರ್ಲಾಲು ಎಂಬಲ್ಲಿ ನಡೆದಿದೆ.

ಲಕ್ಷ್ಮೀ ಎಂಬವರ ಮನೆಯಲ್ಲಿ ಸೆ.16 ರಂದು ಕಳ್ಳತನ ನಡೆದಿದ್ದು, ಅವರು ಬೆಳಗ್ಗೆ 9.45ರ ಸುಮಾರಿಗೆ ಮನೆಯ ಬಾಗಿಲು ಹಾಕಿ ತನ್ನ ಅತ್ತೆಯನ್ನು ಬೀಡಿ ಬ್ರಾಂಚಿಗೆ ಬಿಡಲು ಸ್ಕೂಟರಿನಲ್ಲಿ ತೆರಳಿದ್ದರು. ಆದರೆ ಈ ಸಂದರ್ಭದಲ್ಲಿ ಅವರು ಮನೆಯ ಬಾಗಿಲಿಗೆ ಬೀಗ ಹಾಕಿರಲಿಲ್ಲ,ಇದೇ ಸಮಯಕ್ಕೆ ಕಾದಿದ್ದ ಕಳ್ಳರು ಮನೆಗೆ ನುಗ್ಗಿ ಗೊದ್ರೇಜ್ ಕಪಾಟಿನಲ್ಲಿ ಇಟ್ಟಿದ್ದ ಒಂದು ಮುಕ್ಕಾಲು ಪವನ್ ಚಿನ್ನದ ಪೆಂಡೆಂಟ್ ಚೈನ್ ಮತ್ತು 2 ಪವನ್ ನ ಚಿನ್ನದ ಉಂಗುರ ಮತ್ತು ಅರ್ಧ ಪವನ್ ನ ಚಿನ್ನದ ಕಿವಿಯೋಲೆ ಸೇರಿದಂತೆ ಸುಮಾರು 2 ಲಕ್ಷ ಮೌಲ್ಯದ ಚಿನ್ನಾಭರಣ ಎಗರಿಸಿ ಪರಾರಿಯಾಗಿದ್ದಾರೆ.ಲಕ್ಷ್ಮೀಯವರು ಅತ್ತೆಯನ್ನು ಬಿಟ್ಟು ಮರಳಿ ಮನೆಗೆ ಬಂದಾಗ ಕಪಾಟಿನಲ್ಲಿರಿಸಿದ್ದ ಆಭರಣಗಳು ಕಳುವಾಗಿರುವುದು ಕಂಡುಬಂದಿದೆ.
ಈ ಕುರಿತು ಲಕ್ಷ್ಮೀ ಅಜೆಕಾರು ಪೊಲೀಸ್ ಠಾಣೆಗೆ ದೂರು ನೀಡಿದ್ದು ಈ ಕುರಿತು ಪ್ರಕರಣ ದಾಖಲಾಗಿದೆ

                       in 

Leave a Reply

Your email address will not be published. Required fields are marked *