ಬೆಂಗಳೂರು: ಮುಡಾ ಹಗರಣದಲ್ಲಿ ನ್ಯಾಯಾಲಯ ನೀಡಿರುವ ತೀರ್ಪನ್ನು ಸ್ವಾಗತಿಸುತ್ತೇನೆ, ಈಗಾಗಲೇ ಲೋಕಾಯುಕ್ತ ತನಿಖೆಗೆ ಹೊಣೆ ವಹಿಸಲಾಗಿದೆ, ನಾನು ತನಿಖೆ ಎದುರಿಸಲು ಸಿದ್ಧ ಎಂದು ಸಿಎಂ ಸಿದ್ಧರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಅವವರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಸಿಎಂ ಸಿದ್ಧರಾಮಯ್ಯನವರ ವಿರುದ್ಧ ತನಿಖೆ ನಡೆಸುವಂತೆ ಹೊರಬಿದ್ದ ಆದೇಶದ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನಾನು ಈಗ ಕೇರಳಕ್ಕೆ ಹೋಗುತ್ತಿದ್ದೇನೆ. ನನಗೆ ಇನ್ನೂ ಆದೇಶದ ಪ್ರತಿ ಸಿಕ್ಕಿಲ್ಲ, ಸಂಪೂರ್ಣ ಆದೇಶದ ಪ್ರತಿ ಸಿಕ್ಕರೆ ಪ್ರತಿಕ್ರಿಯೆ ನೀಡುತ್ತೇನೆ. ಕೋರ್ಟ್ ಆದೇಶದ ಪ್ರತಿ ಸಿಕ್ಕ ಮೇಲೆ ವಕೀಲರ ಜೊತೆ ಚರ್ಚಿಸುತ್ತೇನೆ. ವಕೀಲರ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ.ನಾವು ತನಿಖೆ ಎದುರಿಸಲು ತಯಾರಾಗಿದ್ದೇವೆ. ತನಿಖೆಗೆ ಯಾವುದೇ ರೀತಿ ಹೆದರುವುದಿಲ್ಲ ಎಂದರು.ಕಾನೂನಿನ ಜೊತೆ ಹೋರಾಟ ಮಾಡಲಿಕ್ಕೆ ತಯಾರಾಗಿದ್ದೇವೆ.ನಿನ್ನೆ ಈ ಮಾತು ಹೇಳಿದ್ದೇನೆ ಎಂದರು.
in