
ಕಾರ್ಕಳ: ಕಲ್ಲುಕೋರೆಯಲ್ಲಿ ಬಂಡೆ ಒಡೆಯುವ ವೇಳೆ ಕಲ್ಲೊಂದು ಕಾರ್ಮಿಕನ ತಲೆಗೆ ಬಡಿದು ಆತ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫಲಿಸದೇ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ನಂದಳಿಕೆಯಲ್ಲಿ ಸಂಭವಿಸಿದೆ.
ರಾಯಚೂರು ಮೂಲದ ಶಿವರಾಜ (27ವ) ಎಂಬಾತ ಮೃತಪಟ್ಟ ಕಾರ್ಮಿಕ. ಶಿವರಾಜ ಮೇ 8 ರಂದು ಮಧ್ಯಾಹ್ನ ಕಲ್ಲುಕೋರೆಯಲ್ಲಿ ಕೆಲಸ ಮುಗಿಸಿ ಹೊರಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಗಂಭೀರವಾಗಿ ಗಾಯಗೊಂಡ ಶಿವರಾಜ್ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




