
ಕಾರ್ಕಳ, ಜು. 09: ವಿಕಾಸ ಸೇವಾ ಸಂಸ್ಥೆ ವತಿಯಿಂದ ಶಾಸಕರ ಕಚೇರಿಯಲ್ಲಿ ನಡೆಯುತ್ತಿರುವ ವಿಕಾಸ ಉದ್ಯೋಗ ಮೇಳವನ್ನು ಬಿಜೆಪಿ ಹಿರಿಯ ಮುಖಂಡ ಬೋಳ ಪ್ರಭಾಕರ ಕಾಮತ್ ಉದ್ಘಾಟಿಸಿದರು.

ಕಾರ್ಯಕ್ರಮ ರೂವಾರಿ ಶಾಸಕ ಸುನಿಲ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಷ್ಟ್ರೀಯ ವಿದ್ಯಾರ್ಥಿ ದಿನದಂದು ಉದ್ಯೋಗ ಮೇಳ ಆಯೋಜಿಸಲಾಗಿದೆ. ತಾಲೂಕಿನ ವಿದ್ಯಾರ್ಥಿಗಳಿಗೆ ಸರ್ಕಾರಿ ನೇಮಕಾತಿ ಪರೀಕ್ಷೆಗಳನ್ನು ಎದುರಿಸುವ ನಿಟ್ಟಿನಲ್ಲಿ ವಿಕಾಸ ಪರೀಕ್ಷಾ ಸೇತು ಕಾರ್ಯಕ್ರಮದ ಮೂಲಕ ತರಬೇತಿ ನೀಡುವ ಕಾರ್ಯಾಗಾರ ಮುಂದಿನ ದಿನಗಳಲ್ಲಿ ನಿರಂತರವಾಗಿ ನಡೆಯಲಿದೆ. ಅಭ್ಯರ್ಥಿಗಳು ಆತ್ಮವಿಶ್ವಾಸದಿಂದ ಸಂದರ್ಶನ ಎದುರಿಸಿ ಇದರಿಂದ ಉದ್ಯೋಗ ಸಿಗುವುದರ ಜೊತೆಗೆ ಬದುಕಿನಲ್ಲಿ ಸವಾಲುಗಳನ್ನು ಎದುರಿಸಲು ಸಾಧ್ಯ ಎಂದರು. ಯುವ ಸಮುದಾಯದ ಸಮಾಜದ ಆಸ್ತಿ ,ಆದ್ದರಿಂದ ವಿದ್ಯಾರ್ಥಿಗಳು ಭವಿಷ್ಯದ ಕುರಿತು ಆತಂಕರಾಗದೇ ಎದೆಗುಂದದೆ ಮುನ್ನಡೆಯಿರಿ ನಿಮ್ಮ ಜೊತೆ ವಿಕಾಸ ಕಚೇರಿ ಸದಾ ಬೆಂಬಲವಾಗಿ ನಿಲ್ಲಲಿದೆ ಎಂದರು. ಆರಂಭದಲ್ಲಿ ಸಿಕ್ಕಿದ ಉದ್ಯೋಗವನ್ನು ಆರಂಭಿಸಿ,ಯಾಕೆಂದರೆ ಅನುಭವ ಎನ್ನುವುದು ಬಹಳ ಮುಖ್ಯ.ಆದ್ದರಿಂದ ಸ್ವಲ್ಪ ತಿಂಗಳುಗಳ ಕಾಲ ಉದ್ಯೋಗದ ಅನುಭವ ಪಡೆದು ನಂತರ ಬೇರೆ ಕಂಪನಿಗಳಿಗೆ ಉದ್ಯೋಗಾವಕಾಶಗಳು ಒದಗಿ ಬರುತ್ತದೆ ಎಂದರು.
ಈ ಸಂದರ್ಭದಲ್ಲಿ ಉದ್ಯಮಿ ಬೋಳ ಪ್ರಭಾಕರ ಕಾಮತ್,ಉದ್ಯಮಿ ಗಣೇಶ್ ಕಾಮತ್,ಮಣಿರಾಜ ಶೆಟ್ಟಿ, ರಾಜೇಶ್ವರಿ ಶಿಕ್ಷಣ ದೇವಿಪ್ರಸಾದ್ ಶೆಟ್ಟಿ,ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್,ಜಿಲ್ಲಾ ಉಪಾಧ್ಯಕ್ಷ ಮಹಾವೀರ ಹೆಗ್ಡೆ ,ಫಾಕ್ಸ್ ಕಾನ್ ಸಂಸ್ಥೆಯ ಮುಖ್ಯಸ್ಥರಾದ ರಾಜೇಶ್ವರಿ,ಸ್ಪೆಕ್ಟ್ರಮ್ ಸೊಲ್ಯುಶನ್ ಸಂಸ್ಥೆಯ ಮುಖ್ಯಸ್ಥ ದಿವಾಕರ್ ಮುಂತಾದವರು ಉಪಸ್ಥಿತರಿದ್ದರು.
ಸುಮಾರು 1500 ಕ್ಕೂ ಅಧಿಕ ಅಭ್ಯರ್ಥಿಗಳು ಸಂದರ್ಶನದಲ್ಲಿ ಪಾಲ್ಗೊಂಡಿದ್ದರು.
ಪ್ರಸಾದ್ ಸ್ವಾಗತಿಸಿದರು. ಕರುಣಾಕರ ಕೋಟ್ಯಾನ್ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.



.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
