
ಕಾರ್ಕಳ,ಡಿ.22: ಕಾರ್ಕಳದ ಚೇತನಾ ವಿಶೇಷ ಶಾಲೆಯ ವೃತ್ತಿ ಶಿಕ್ಷಣ ತರಬೇತಿ ವಿಭಾಗದಲ್ಲಿ ವಿದ್ಯಾರ್ಥಿಗಳಿಂದ ತಯಾರುಗೊಂಡ ಪರಿಸರ ಸ್ನೇಹಿ ಮರುಬಳಕೆ ಕೈಚೀಲ ಮಾರಾಟಕ್ಕೆ ಬಿಡುಗಡೆ ಕಾರ್ಯಕ್ರಮ ನಾಳೆ (ಡಿ.23) ನಡೆಯಲಿದೆ.
ವಿದ್ಯಾರ್ಥಿಗಳಿಂದ ಸಿದ್ಧಗೊಂಡ ವಸ್ತುಗಳನ್ನು ಸಾರ್ವಜನಿಕರು ಹಾಗೂ ವಿವಿಧ ಸಂಘ ಸಂಸ್ಥೆಗಳು ತಮ್ಮ ಸಭೆ ಸಮಾರಂಭಗಳಲ್ಲಿ ಸ್ಮರಣಿಕೆ ರೂಪದಲ್ಲಿ ಅತಿಥಿ ಗಣ್ಯರಿಗೆ ನೀಡಲು ಅದನ್ನು ಖರೀದಿಸುತ್ತಿದ್ದಾರೆ.
ಇದೀಗ ಸೇವಾ ಕ್ಷೇತ್ರದ ಮುಂದುವರಿದ ಅಂಗವಾಗಿ ವಿದ್ಯಾರ್ಥಿಗಳು ಸ್ವಾವಲಂಬಿಯಾಗಿ ಬದುಕಲು ನಡೆಸುವ ಪ್ರಯತ್ನದಲ್ಲಿ ಅವರಿಗೆ ಪರಿಸರ ಸ್ನೇಹಿ ಮರು ಬಳಕೆಯ ಕೈ ಚೀಲಗಳನ್ನು ಸಿದ್ಧಗೊಳಿಸುವ ತರಬೇತಿ ನೀಡಿ ಅವರು ಸಿದ್ಧಗೊಳಿಸಿದ ಕೈ ಚೀಲಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗುವುದು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳ ಪರಿಶ್ರಮಕ್ಕೆ
ಪ್ರೋತ್ಸಾಹಿಸಬೇಕಾಗಿ ತಮ ಚೇತನಾ ವಿಶೇಷ ಶಾಲೆಯ ಪ್ರಕಟಣೆ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9480531469, 7619255170 ಅನ್ನು ಸಂಪರ್ಕಿಸಲು ಕೋರಲಾಗಿದೆ.

.
.
