
ಕಾರ್ಕಳ,ಡಿ,24: ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಬೈಕ್ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡ ಘಟನೆ ಕಾರ್ಕಳದ ಸಾಲ್ಮರ ವಿನ್ಯಾಸ್ ಹಾರ್ಡ್ವೇರ್ ಬಳಿ ನಡೆದಿದೆ.
ಕಾರ್ಕಳ ನಿವಾಸಿ ಸುಬ್ರಾಯ ಶೆಣೈ ಎಂಬವರು ಡಿ.23ರಂದು ಬೆಳಗ್ಗೆ ಕಾರ್ಕಳ ಪೇಟೆಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದವೇಳೆ ಜೋಡುರಸ್ತೆ ಕಡೆಯಿಂದ ಅತೀವೇಗವಾಗಿ ಬಂದ ಬೈಕ್ ಸವಾರ ನಿಯಂತ್ರಣ ತಪ್ಪಿ ಸುಬ್ರಾಯ ಶೆಣೈಯವರಿಗೆ ಹಿಂಬದಿಯಿAದ ಡಿಕ್ಕಿ ಹೊಡೆದ ಪರಿಣಾಮ ಅವರ ತಲೆ ಹಾಗೂ ಕೈಕಾಲಿಗೆ ಗಂಭೀರ ಗಾಯಗಳಾಗಿ, ಅವರನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


.
.
