
ಕಾರ್ಕಳ, ಫೆ.21: ತಾಲೂಕಿನ ಕುಕ್ಕುಂದೂರು ಎಂಬಲ್ಲಿ ಚಿಕ್ಕಮಗಳೂರು ಮೂಲದ ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಚಿಕ್ಕಮಗಳೂರಿನ ಸಚಿನ್ ಶೆಟ್ಟಿ (25) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.
ಆತ ಫೆ.20 ರಂದು ಕುಕ್ಕುಂದೂರಿನ ನಾಗ ಎಂಟರ್ಪ್ರೈಸರ್ಸ್ ಕಟ್ಟಡದ 3ನೇ ಮಹಡಿಯ ಬಾಡಿಗೆ ಮನೆಯಲ್ಲಿ ಮೇಲ್ಛಾವಣಿಯ ಕಬ್ಬಿಣದ ಕೊಂಡಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

.
.
.
.
.
.
.
.
.
.
