
ಕಾರ್ಕಳ, ಫೆ.26: ಪಟ್ಟಣಗಳು ಅಭಿವೃದ್ಧಿ ಹೊಂದಬೇಕಾದರೆ ಹೊಸಹೊಸ ಉದ್ಯಮಗಳು ಆರಂಭವಾಗಬೇಕು, ಇದರಿಂದ ವ್ಯಾಪಾರ ವಹಿವಾಟು ಬೆಳೆದಾದ ಒಟ್ಟಾರೆಯಾಗಿ ಸಮಾಜದ ಆರ್ಥಿಕ ಚಟುವಟಿಕೆಗಳಿಗೆ ಬಲ ಬರುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಡಾ.ಎಂ.ವೀರಪ್ಪ ಮೊಯ್ಲಿ ಹೇಳಿದರು.

ಅವರು ಗುರುವಾರ ಕಾರ್ಕಳದ ಜೋಡುರಸ್ತೆಯಲ್ಲಿನ ಕಾರ್ಲ ಸಿಟಿ ಸೆಂಟರ್ ಕಟ್ಟಡದಲ್ಲಿನ ಮಾನಸ ಕಂಫರ್ಟ್ಸ್ ಬೋರ್ಡಿಂಗ್ &ಲಾಡ್ಜಿಂಗ್ ಉದ್ಘಾಟಿಸಿ ಮಾತನಾಡಿದರು. ಜೋಡುರಸ್ತೆ ಪೇಟೆಯು ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, ಇದು ಕಾರ್ಕಳದ ಪ್ರಮುಖ ವ್ಯಾಪಾರ ಕೇಂದ್ರವಾಗುತ್ತದೆ ಸಾಗುತ್ತಿದೆ. ಮಾನಸ ಕಂಫರ್ಟ್ಸ್ ನ ಪಾಲುದಾರರು ತಮ್ಮ ಉದ್ಯಮದಲ್ಲಿ ಬರುವ ಲಾಭದ ಒಂದು ಪಾಲನ್ನು ಸಮಾಜಕ್ಕೆ ನೀಡುವ ಮೂಲಕ ಸೇವಾ ಕಾರ್ಯಕ್ಕೆ ಮುನ್ನುಡಿ ಬರೆದಿದ್ದಾರೆ.ಇವರ ಸಾಮಾಜಿಕ ಸೇವಾ ಕಾರ್ಯಗಳು ಮುಂದುವರಿಯಲಿ ನೂತನ ಉದ್ಯಮವು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕಿಸಾನ್ ಸಭಾ ಟ್ರಸ್ಟ್ ಅಧ್ಯಕ್ಷ ಹರ್ಷ ಮೊಯ್ಲಿ, ಕ್ರಿಯೇಟಿವ್ ಕಾಲೇಜಿನ ಸಂಸ್ಥಾಪಕ ಗಣನಾಥ ಶೆಟ್ಟಿ, ಹಿರಿಯ ವಕೀಲರಾದ ಮಣಿರಾಜ ಶೆಟ್ಟಿ, ಹರಿ ಮೊಗೆರಾಯ, ನೀರೆ ಕೃಷ್ಣ ಶೆಟ್ಟಿ, ಪುರಸಭಾ ಮಾಜಿ ಸದಸ್ಯ ಅಶ್ಫಕ್ ಅಹಮ್ಮದ್, ಸಂತೋಷ್ ಡಿಸಿಲ್ವ, ಪ್ರಕಾಶ್ ಆಚಾರ್ಯ, ಕುಕ್ಕುಂದೂರು ಪಂಚಾಯಿತಿ ಮಾಜಿ ಅಧ್ಯಕ್ಷೆ ಉಷಾ ಕೆ, ಮುಂತಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವೀರಪ್ಪ ಮೊಯ್ಲಿಯವರನ್ನು ಮಾನಸ ಕಂಫರ್ಟ್ಸ್ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು
ಈ ಸಮಾರಂಭದಲ್ಲಿ ಕುಕ್ಕುಂದೂರು ಪಂಚಾಯತಿಯ 9 ಜನ ಸ್ವಚ್ಚತಾ ಕಾರ್ಮಿಕರನ್ನು ಗೌರವಿಸಲಾಯಿತು.ಇದರ ಜೊತೆಗೆ ಬಜಗೋಳಿಯ ಅಹಿಂಸಾ ಅನಿಮಲ್ ಟ್ರಸ್ಟ್, ಸುರಕ್ಷಾ ಆಶ್ರಮದ ಸಾಯಿರಾ ಬಾನು, ವಿಜೇತಾ ವಿಶೇಷ ಶಾಲೆಯ ಮುಖ್ಯಸ್ಥರನ್ನು ಗುರುತಿಸಿ ಗೌರವಿಸಲಾಯಿತು. ಕಾರ್ಕಳ ಮೈನ್ ಶಾಲೆಗೆ ಸುಣ್ಣಬಣ್ಣ ಹಾಗೂ ಕಾರ್ಕಳ ನಗರ ಪೊಲೀಸ್ ಠಾಣೆಗೆ ಬ್ಯಾರಿಕೇಡ್ ಗಳನ್ನು ಹಸ್ತಾಂತರ ಸೇರಿದಂತೆ ಒಟ್ಟು 6 ಸೇವಾ ಕಾರ್ಯಗಳನ್ನು ನಡೆಸಲಾಯಿತು.
ಮಾನಸ ಕಂಫರ್ಟ್ಸ್ ಪಾಲುದಾರರಾದ ನವೀನ್ ದೇವಾಡಿಗ, ಮಧುರಾಜ್ ಶೆಟ್ಟಿ ಹಾಗೂ ಶಾಕೀರ್ ಅಹಮ್ಮದ್ ಅತಿಥಿ ಗಣ್ಯರನ್ನು ಸ್ವಾಗತಿಸಿದರು.
ನ್ಯಾಯವಾದಿ ಶೇಖರ ಮಡಿವಾಳ ಪ್ರಾಸ್ತಾವಿಕವಾಗಿ ಮಾತನಾಡಿದರು.


.
.
.
.
.
.
.
.
.
.
