
ಕಾರ್ಕಳ, ಫೆ,27: ಹಿರ್ಗಾನ ಕೊಡಮಣಿತ್ತಾಯ, ಧರ್ಮರಸು ಕುಕ್ಕಿನಂತಾಯ ಹಾಗೂ ಬ್ರಹ್ಮಬೈದರ್ಕಳ ಗರಡಿ ದೈವಗಳ ವಾರ್ಷಿಕ ನೇಮೋತ್ಸವ ಹಾಗೂ ಮಹಾಮ್ಮಾಯಿ ದೇವರ ನರ್ತನ ಸೇವೆಯು ಕೃಷ್ಣರಾಜೇಂದ್ರ ಭಟ್ ನೇತೃತ್ವದಲ್ಲಿ ಮಾರ್ಚ್ 7ರಂದು ಶನಿವಾರ ನಡೆಯಲಿದೆ.
ಶನಿವಾರ ಮಧ್ಯಾಹ್ನ 3 ಗಂಟೆಗೆ ದೈವಗಳ ಭಂಡಾರ ಇಳಿದು ಬಳಿಕ ಮಹಮ್ಮಾಯಿ ದೇವರ ನರ್ತನ ಸೇವೆ ನಂತರ ರಾತ್ರಿ 9 ರಿಂದ ದೈವಗಳ ನೇಮೋತ್ಸವ ನಡೆಯಲಿದೆ ಎಂದು ಕೊಡಮಣಿತ್ತಾಯ ದೈವಸ್ಥಾನದ ಆಡಳಿತ ಮೊಕ್ತೇಸರರಾದ ಚೇತನ್ ಶೆಟ್ಟಿ ಕೊರಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


.
.
.
.
.
.
.
.
.
.
