
ಕಾರ್ಕಳ, ಫೆ. 28:ಮಾರುತಿ ಇಕೋ ಕಾರು ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಹಾಗೂ ಸಹಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಶನಿವಾರ ಸಂಜೆ ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ಅಯ್ಯಪ್ಪನಗರ ಬಳಿ ಸಂಭವಿಸಿದೆ.
ಈ ಭೀಕರ ಅಪಘಾತದಲ್ಲಿ ಎರ್ಲಪಾಡಿಯ ಶಿವಾನಂದ (18) ಹಾಗು ರಕ್ಷಿತ್(19) ಎಂಬ ಹದಿಹರೆಯದ ಯುವಕರಿಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ.
ಯುವಕರಿಬ್ಬರು ಕಾರ್ಕಳ ಕಡೆಯಿಂದ ಬೈಲೂರು ಕಡೆಗೆ ಹೋಗುತ್ತಿದ್ದಾಗ ಅಯ್ಯಪ್ಪನಗರ ಬಳಿ ಬೈಲೂರು ಕಡೆಯಿಂದ ಕಾರ್ಕಳ ಕಡೆಗೆ ಬರುತ್ತಿದ್ದ ಕಾರು ನೇರವಾಗಿ ಬೈಕಿಗೆ ಅಪ್ಪಳಿಸಿದೆ.
ಈ ರಣಭೀಕರ ಅಪಘಾತದಲ್ಲಿ ಬೈಕ್ ಮುಂಭಾಗ ಛಿದ್ರವಾಗಿದ್ದು ಭೀಕರತೆ ಸಾಕ್ಷಿಯಾಗಿತ್ತು.
ಕಾರ್ಕಳ ನಗರ ಠಾಣಾ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.


.
.
.
.
.
.
.
.
.
.
