Share this news

ಉಡುಪಿ, ಮಾ. 01: ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಎಸ್ ಐ ಆಗಿದ್ದ ನಾಸಿರ್ ಹುಸೇನ್(59) ಭಾನುವಾರ ಬೆಳಗ್ಗೆ ಉಡುಪಿಯ ಅಜ್ಜರಕಾಡು ಮೈದಾನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ನಮ್ಮ ಪೊಲೀಸ್ ನಮ್ಮ ಹೆಮ್ಮೆ ಡ್ರಗ್ಸ್ ಮುಕ್ತ ಹಾಗೂ ಸೈಬರ್ ಅಪರಾಧ ಜಾಗೃತಿ ಕುರಿತ ಮ್ಯಾರಥಾನ್ ಓಟದಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ಈ ಮ್ಯಾರಥಾನ್ ಓಟದಲ್ಲಿ ಜಿಲ್ಲೆಯ ಬಹುತೇಕ ಪೊಲೀಸರು ಭಾಗವಹಿಸಿದ್ದರು. ಅಜ್ಜರಕಾಡು ಕ್ರೀಡಾಂಗಣದಿಂದ ಸಾಗಿದ ಈ ಮ್ಯಾರಥಾನ್ ಉಡುಪಿ ತಾಲೂಕು ಪಂಚಾಯತ್ ಮುಂಭಾಗದಲ್ಲಿ ಸಾಗುತ್ತಿದ್ದಾಗ ನಾಸಿರ್ ಹುಸೇನ್ ಏಕಾಎಕಿ ಕುಸಿದುಬಿದ್ದರು. ತಕ್ಷಣವೇ ಅವರನ್ನು ಸ್ಥಳೀಯ ಕೆಎಂಸಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಅಸುನೀಗಿದ್ದಾರೆ.
ಓರ್ವ ದಕ್ಷ ಅಧಿಕಾರಿಯಾಗಿದ್ದ
ನಾಸಿರ್ ಹುಸೇನ್‌ ಈ ಹಿಂದೆ ಕಾರ್ಕಳ ನಗರ ,ಗ್ರಾಮಾಂತರ ,ಪಡುಬಿದ್ರೆ,ಅಜೆಕಾರು ಪೊಲೀಸ್ ಠಾಣೆ ಸೇರಿದಂತೆ ಹಲವು ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು.

Leave a Reply

Your email address will not be published. Required fields are marked *