
ಕಾರ್ಕಳ,ಮಾ. 02: ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ಹಾರ್ಜೆಡ್ಡು ಎಂಬಲ್ಲಿ ಅಕ್ರಮ ದನ ಸಾಗಾಟ ಮಾಡುತ್ತಿದ್ದ ವಾಹನವನ್ನು ವಶಪಡಿಸಿಕೊಂಡ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಕಾರ್ಕಳ ನಗರ ಠಾಣೆ ಸಿ ಎಚ್ ಸಿ ಲೋಕೇಶ್ ಅವರು ಮಾ.1 ರಾತ್ರಿ ರಂದು ಕರ್ತವ್ಯದಲ್ಲಿದ್ದ ವೇಳೆ ಬೈಲೂರು ಕಡೆಯಿಂದ ಕಾರ್ಕಳಕ್ಕೆ ಬರುತ್ತಿದ್ದಾಗ ಹಾರ್ಜೆಡ್ಡು ಶ್ರೀ ದೇವಿಕೃಪಾ ಹಾಲ್ ನ ಮುಂದುಗಡೆ ರಸ್ತೆ ಬದಿಯಲ್ಲಿ ಟಾಟಾ ಇಂಟ್ರಾ ಕಂಪನಿಯ ಗೂಡ್ಸ್ ವಾಹನವೊಂದು ನಿಂತಿದ್ದು, ಪೊಲೀಸ್ ಜೀಪ್ ನೋಡಿ ಚಾಲಕ ಅನುಮಾನಾಸ್ಪದವಾಗಿ ವರ್ತಿಸಿದ್ದ ಹಿನ್ನಲೆ ಪೊಲೀಸರು ಸಮೀಪ ಹೋಗಿ ಗೂಡ್ಸ್ ಅನ್ನು ಪರಿಶೀಲಿಸಿದಾಗ ಅದರಲ್ಲಿ 2 ದನಗಳನ್ನು ಹಿಂಸಾತ್ಮಕವಾಗಿ ಕಟ್ಟಿ ಹಾಕಲಾಗಿತ್ತು.
ಆರೋಪಿಗಳು ಜಾನುವಾರುಗಳನ್ನು ಕಳವುಗೈದು ಕಸಾಯಿಖಾನೆಗೆ ಸಾಗಿಸುತ್ತಿರುವುದು ತಿಳಿದುಬಂದಿದೆ. ಜಾನುವಾರುಗಳನ್ನು ರಕ್ಷಿಸಲಾಗಿದ್ದು, ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


.
.
.
.
.
.
.
.
.
.
