
ಕಾರ್ಕಳ,ಮಾ.7: ಪ್ರತಿಷ್ಠಿತ ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಇದರ 2026-27ನೇ ಸಾಲಿನ ಒಂಬತ್ತನೇ ವರ್ಷದ ಅಧ್ಯಕ್ಷರಾಗಿ ಸಿವಿಲ್ ಎಂಜಿನಿಯರ್ ಮಂಜುನಾಥ ಹೆಗ್ಡೆ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ನಿವೃತ್ತ ಪ್ರಾಂಶುಪಾಲರಾದ ಗಣೇಶ್ ಬಾರ್ಲಾಯ ಆಯ್ಕೆಯಾಗಿದ್ದಾರೆ.
ಮಾ. 06 ರಂದು ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸಂಸ್ಥೆಯ ಮಾರ್ಗದರ್ಶಕರಾದ ರೋಟರಿ ಮಾಜಿ ಜಿಲ್ಲಾ ಗವರ್ನರ್ ಡಾ| ಭರತೇಶ್ ಆದಿರಾಜ್, ಹಾಲಿ ಅಧ್ಯಕ್ಷರಾದ ಸುರೇಂದ್ರ ನಾಯಕ್, ಪೂರ್ವಾಧ್ಯಕ್ಷರುಗಳಾದ ಪ್ರಶಾಂತ್ ಬಿಳಿರಾಯ, ಪ್ರಕಾಶ್ ಪೈ, ಉಪೇಂದ್ರ ವಾಗ್ಲೆ ಹಾಗು ಇತರರು ಹಾಜರಿದ್ದರು. ನೂತನ ಅಧ್ಯಕ್ಷರು ಮತ್ತು ಕಾರ್ಯದರ್ಶಿಯವರಿಗೆ ಶುಭ ಹಾರೈಸಿದ್ದಾರೆ.


.
.
.
.
.
.
.
.
.
.
