
ಟೆಹರಾನ್, ಮಾ.17: ಇರಾನ್‌ನ ಪ್ರಭಾವಿ ನಾಯಕ ಹಾಗೂ ಸುಪ್ರೀಂ ಲೀಡರ್ ಅಲಿ ಖಮೇನಿಯವರ ಆಪ್ತ ಸಲಹೆಗಾರ, ಭದ್ರತಾ ಮುಖ್ಯಸ್ಥ ಅಲಿ ಲಾರಿಜಾನಿ ಅವರನ್ನು ಇಸ್ರೇಲ್ ಭದ್ರತಾ ಪಡೆಗಳು ಹತ್ಯೆಗೈದಿವೆ ಎಂದು ವರದಿಯಾಗಿದೆ. ಈ ಘಟನೆಯು ಜಾಗತಿಕ ಮಟ್ಟದಲ್ಲಿ ಭಾರಿ ಸಂಚಲನ ಮೂಡಿಸಿದೆ. ಆದರೆ ಇರಾನ್ ಮಾತ್ರ ಇದನ್ನು ದೃಢಪಡಿಸಿಲ್ಲ.
ಲಾರಿಜಾನಿ ಇರಾನ್ ಸಂಸತ್ತಿನ ಮಾಜಿ ಸ್ಪೀಕರ್ ಆಗಿ ಮತ್ತು ಇರಾನ್‌ನ ಪರಮಾಣು ಮಾತುಕತೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪ್ರಸ್ತುತ ಅವರು ದೇಶದ ಆಯಕಟ್ಟಿನ ಭದ್ರತಾ ವಿಚಾರಗಳಲ್ಲಿ ನಿರ್ಣಾಯಕ ಸಲಹೆಗಾರರಾಗಿದ್ದರು.
ಅಲಿ ಲಾರಿಜಾನಿ ಹತ್ಯೆಯ ಹಿಂದೆ ವಿದೇಶಿ ಗುಪ್ತಚರ ಸಂಸ್ಥೆಗಳ ಕೈವಾಡವಿದೆಯೇ ಅಥವಾ ಅವರು ಬಹಿರಂಗಪಡಿಸಲು ಮುಂದಾಗಿದ್ದ ರಹಸ್ಯಗಳೇ ಅವರಿಗೆ ಮುಳುವಾಯಿತೇ ಎಂಬ ಬಗ್ಗೆ ವ್ಯಾಪಕ ಚರ್ಚೆಗಳು ನಡೆಯುತ್ತಿವೆ.















.
.
.
.
.
.
.
.
.
.
