
ಕಾರ್ಕಳ,ಏ. 04 : ಬಡತನದ ಬೇಗೆಯಲ್ಲಿ ಬೆಂದು ವಾಸಿಸಲು ಸರಿಯಾದ ಮನೆಯಿಲ್ಲದೇ ಪರದಾಡುತ್ತಿದ್ದ ಕುಟುಂಬಕ್ಕೆ ಕಾರ್ಕಳದ ಉದ್ಯಮಿ ಬೋಳ ಪ್ರಶಾಂತ್ ಕಾಮತ್ ಅವರ ಹುಟ್ಟುಹಬ್ಬದ ಸಲುವಾಗಿ ಕಾರ್ಕಳ ಟೈಗರ್ಸ್ ಹಾಗೂ ಟೀಮ್ ಸಿಂಧೂರ್ ನ ಸದಸ್ಯರು ಸೇರಿ ಸುಂದರವಾದ ಮನೆ ನಿರ್ಮಿಸಿ ಕೊಟ್ಟಿದ್ದಾರೆ.
ಕಾರ್ಕಳ ತಾಲೂಕಿನ ಮಿಯ್ಯಾರು ಗ್ರಾಮದ ಗೀತಾ ಆಚಾರ್ಯ ಬಡ ಕುಟುಂಬಕ್ಕೆ ಮನೆ ನಿರ್ಮಿಸಿ ಗೃಹಪ್ರವೇಶ ಮಾಡಿಸಿದ್ದಾರೆ.
ಕಾರ್ಕಳ ಟೈಗರ್ಸ್ ನ ಸ್ಥಾಪಕ ಸದಸ್ಯರಾದ ರವಿ ಶೆಟ್ಟಿ ಮತ್ತು ಬಾಂಗ್ಲಾದೇಶಿಯರ ದಬ್ಬಾಳಿಕೆಯಿಂದ ಕೊಲೆಯಾದ ಯುವಕ ದೀಪು ಚಂದ್ರದಾಸ್ ಇವರಿಬ್ಬರ ಸವಿನೆನಪಿಗಾಗಿ ಮನೆಯನ್ನು ನಿರ್ಮಿಸಿ ಮನೆಗೆ ‘ರವಿ ದೀಪ್’ ಎಂದು ಹೆಸರನ್ನಿಟ್ಟು ಕುಟುಂಬಕ್ಕೆ ಮನೆಯನ್ನು ಹಸ್ತಾಂತರಿಸಲಾಯಿತು.
ಬಡ ಕುಟುಂಬಕ್ಕೆ ವಾಸಕ್ಕೆ ಯೋಗ್ಯವಾದ ಮನೆ ನಿರ್ಮಿಸಿ ಆಸರೆಯಾದ ಕಾರ್ಕಳ ಟೈಗರ್ಸ್ ಹಾಗೂ ಟೀಮ್ ಸಿಂಧೂರ್ ನ ಸದಸ್ಯರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಉದ್ಯಮಿಯಾಗಿರುವ ಬೋಳ ಪ್ರಶಾಂತ್ ಕಾಮತ್ ಪ್ರಚಾರ ಬಯಸದೇ ಸದ್ದಿಲ್ಲದೇ ಸಮಾಜ ಸೇವೆ ಮಾಡುತ್ತಿದ್ದು,ಬೋಳ ಪ್ರಶಾಂತ್ ಕಾಮತ್ ಎಂಬ ಯುವಕನನ್ನು ಸಮಾಜ ಸೇವೆಗೆ ತರಲೇಬೇಕೆಂಬ ಪಣ ತೊಟ್ಟ ಅವರ ಹಿತೈಷಿಗಳ ಪ್ರಯತ್ನವೇ ಬೋಳ ಪ್ರಶಾಂತ್ ಕಾಮತ್ ಅಭಿಮಾನಿ ಬಳಗ ಕಾರ್ಕಳ ಟೈಗರ್‌ನ ಆರಂಭಕ್ಕೆ ಕಾರಣವಾಗಿದೆ.
ಕಾರ್ಕಳದಲ್ಲಿ ಜನ ಸಂಘ ಹಾಗೂ ಬಿಜೆಪಿಯನ್ನು ಪ್ರಬಲವಾಗಿ ಕಟ್ಟಲು ನಿರಂತರ ಹೋರಾಟ ಮಾಡಿದವರು ಕಾರ್ಕಳದ ಬೋಳ ಪ್ರಭಾಕರ ಕಾಮತ್ ಅವರು, ಬೋಳ ಪ್ರಭಾಕರ ಕಾಮತ್ ಎಂದರೆ ಕಾರ್ಕಳ ತಾಲೂಕು ಮಾತ್ರವಲ್ಲದೇ ಕರಾವಳಿಯಲ್ಲಿ ಪ್ರಭಾವೀ ಹೆಸರು. ಕಾರ್ಕಳದಲ್ಲಿ ಬಿಜೆಪಿ ಪರಿಣಾಮಕಾರಿಯಾಗಿ
ಇಂದಿನ ಮಟ್ಟದಲ್ಲಿ ಸಾಗ ಬೇಕಾದರೆ ಅವರು ಅಂದಿನ ದಿನಗಳಿಂದಲೂ ಮಾಡಿದ ಹೋರಾಟಕ್ಕೆ ಯಾರು ಕೂಡಾ ಯಾವುದೇ ಬೆಲೆ ಕಟ್ಟಲು ಸಾಧ್ಯವಿಲ್ಲ. ಅವರ ಪಕ್ಷ ಸಿದ್ದಾಂತ, ಆದರ್ಶಗಳು ಪ್ರಸ್ತುತ ಸಮಾಜಕ್ಕೆ ಬಹಳ ಅಗತ್ಯ. ಅವರ ಮಕ್ಕಳಲ್ಲಿ ಬೋಳ ಶ್ರೀನಿವಾಸ ಕಾಮತ್, ಬೋಳ ಪ್ರಶಾಂತ್ ಕಾಮತ್ ಅವರು ಸಾಮಾಜಿಕ ಕ್ಷೇತ್ರದಲ್ಲಿ ಚಿರಪರಿಚಿತರಾಗಿದ್ದಾರೆ.
ಗೀತಾ ಆಚಾರ್ಯ ಅವರ ಮನೆಯ ಪರಿಸ್ಥಿತಿ ಕಂಡು ನಮ್ಮ ಸಂಘಟನೆಯ ಸದಸ್ಯರು ಮನೆ ನಿರ್ಮಿಸುವ ಕಾರ್ಯಕ್ಕೆ ಮುಂದಾಗಿದ್ದರು. ನಮ್ಮೆಲ್ಲರ ಪ್ರಯತ್ನದ ಫಲವಾಗಿ ಬಡ ಕುಟುಂಬಕ್ಕೆ ಸುಂದರವಾದ ಮನೆ ನಿರ್ಮಿಸಿಕೊಟ್ಟಿದ್ದೇವೆ. ನಮ್ಮ ಸಂಘಟನೆಯ ಸದಸ್ಯರಿಬ್ಬರ ನೆನಪಿಗಾಗಿ ಮನೆಯನ್ನು ನಿರ್ಮಿಸಿ ರವಿ -ದೀಪ್ ಎಂದು ಹೆಸರನ್ನಿಟ್ಟು ಹಸ್ತಾಂತರಿಸಲಾಗಿದೆ ಕಾರ್ಕಳ ಟೈಗರ್ಸ್ ಸಂಘಟನೆಯ ಮುಖ್ಯಸ್ಥರಾದ ಬೋಳ ಪ್ರಶಾಂತ್ ಕಾಮತ್ ಹೇಳಿದ್ದಾರೆ.
















.
.
.
.
.
.
.
.
.
.
