
ಕಾರ್ಕಳ, ಏ.13: ಕಾರ್ಕಳ ತಾಲೂಕಿನ ನಂದಳಿಕೆ ಎಂಬಲ್ಲಿ ವೃದ್ಧ ವ್ಯಕ್ತಿಯ ಮೃತದೇಹ ಮನೆಯ ಒಳಗೆ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.ವಾಸುದೇವ ಆಚಾರ್ಯ (70ವ) ಮೃತಪಟ್ಟವರು.
ಅವರು ನಂದಳಿಕೆ ಎಂಬಲ್ಲಿ ವಾಸವಿದ್ದು, ಮರದ ಕೆಲಸ ಮಾಡುತ್ತಿದ್ದರು. ಕೆಲ ದಿನಗಳಿಂದ ಮನೆಯ ಬಾಗಿಲು ಮುಚ್ಚಿದ್ದು, ನಿನ್ನೆ ಮನೆಯ ಒಳಗಡೆಯಿಂದ ವಾಸನೆ ಬರುತ್ತಿದ್ದ ಬಗ್ಗೆ ಪಕ್ಕದ ಮನೆಯವರು ಮಾಹಿತಿ ನೀಡಿದ್ದರು. ಸಂಬಂಧಿಕರು ಸ್ಥಳಕ್ಕೆ ಬಂದು ಬಾಗಿಲು ತೆರೆದು ನೋಡಿದಾಗ ವಾಸುದೇವ ಅವರ ಮೃತದೇಹ ಅಡುಗೆ ಕೋಣೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಈ ಕುರಿತು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
















.
.
.
.
.
.
.
.
.
.
