
ಕಾರ್ಕಳ, ಏ.21: ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಮಲಗಿದ್ದಲ್ಲಿಯೇ ಮೃತಪಟ್ಟಿದ್ದಾರೆ.
ಈದುವಿನ ಚಂದ್ರಹಾಸ ಎಂಬವರ ತಂದೆ ಅನಂದ (58) ಅವರು 8 ವರ್ಷಗಳಿಂದ ಕುಟುಂಬದಿಂದ ಪ್ರತ್ಯೇಕವಾಗಿ ವಾಸವಿದ್ದರು. ಕಳೆದ 7 ತಿಂಗಳಿನಿಂದ ನಿಟ್ಟೆ ಗ್ರಾಮದ ಬಜಕಳ ಹೊಸಮನೆ ಗುತ್ತು ಸುಮಿತ್ರ ಹೆಗ್ಡೆ ಎಂಬವರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದು, ಏ.20 ರಂದು ಬೆಳಿಗ್ಗೆ 10.30ರ ವೇಳೆಗೆ ಮಲಗಿದ್ದವರು ಏಳದೇ ಇದ್ದ ಕಾರಣ ಎಬ್ಬಿಸಲು ಹೋದಾಗ ಅಸ್ವಸ್ಥಗೊಂಡಿದ್ದವರನ್ನು ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆಗೆ ಮೃತಪಟ್ಟಿದ್ದರು.
ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



.
.
.
.
.
.
.
.
.
.

ಕಾರ್ಕಳ, ಏ. 20: ಕಾರ್ಕಳ ತಾಲೂಕು ಮರ್ಣೆ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಆನಂದ ಸೆರ್ವೆಗಾರ್ (65ವ) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.
ಅವರು ಕಳೆದ 15 ವರ್ಷಗಳಿಂದ ಮರ್ಣೆ ಗ್ರಾಮದ ವಸಂತ ಶೆಟ್ಟಿಯವರ ಕುಂಠಿನಿ ಮನೆ ಎಂಬಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು.ವಿಪರೀತ ಮದ್ಯಪಾನ ಮಾಡುವ ಚಟ ಹೊಂದಿದ್ದ ಅವರು ಅದೇ ಕಾರಣಕ್ಕೆ ಮನನೊಂದು ನಿನ್ನೆ(ಏ.19) ರಾತ್ರಿ ಮನೆಯ ಮುಂಭಾಗದ ಮಾವಿನ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಕುರಿತು ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



.
.
.
.
.
.
.
.
.
.
