
ಕಾರ್ಕಳ, ಮೇ.10: ಮುಂಗಾರುಪೂರ್ವ ಅಕಾಲಿಕ ಮಳೆ ಹಾಗೂ ಸಿಡಿಲಿನ ಆರ್ಭಟಕ್ಕೆ ಕಾರ್ಕಳ ತಾಲೂಕಿನ ಹಲವೆಡೆ ಮನೆಗಳಿಗೆ ಕೃಷಿಗೆ ಹಾನಿಯಾಗಿ ಸಾವಿರಾರು ರೂ ನಷ್ಟ ಸಂಭವಿಸಿದೆ.
ಶುಕ್ರವಾರ ಸಂಜೆವೇಳೆ ಸುರಿದ ಭಾರೀ ಗಾಳಿಮಳೆಗೆ ಕುಕ್ಕುಂದೂರು ಗ್ರಾಮದ ಕೇರ್ದಡ್ಡು ನಿವಾಸಿ ಸುಂದರಿ ಎಂಬವರ ಮನೆಗೆ ಮರ ಬಿದ್ದು ಮೇಲ್ಛಾವಣಿಯ ಕುಸಿದು 8 ಸಾವಿರ ರೂ ನಷ್ಟ ಸಂಭವಿಸಿದೆ. ಕಾರ್ಕಳದ ಬಂಗ್ಲೆಗುಡ್ಡೆ ಸದ್ಭಾವನ ನಗರ ನಿವಾಸಿ ಮಾಧವ ಎಂಬವರ ಮನೆಗೆ ಮರ ಬಿದ್ದು 10 ಸಾವಿರ ನಷ್ಟ ಸಂಭವಿಸಿದೆ. ಭಾರೀ ಗಾಳಿಮಳೆಗೆ ಕಡ್ತಲ ಗ್ರಾಮದ ಆನಂದ ನಾಯಕ್ ಎಂಬವರ ಅಡಿಕೆ ಮರಗಳು ತುಂಡಾಗಿ 10 ಸಾವಿರ ರೂ, ನಷ್ಟವಾಗಿದೆ.
ಮಳೆಯ ಜೊತೆಗೆ ಭಾರೀ ಸಿಡಿಲಿನ ಆರ್ಭಟಕ್ಕೆ ಕಲ್ಯಾ ಗ್ರಾಮದ ಅಶೋಕನಗರ ನಿವಾಸಿ ಸುಧಾಕರ ಆಚಾರ್ಯರವರ ಮನೆಗೆ ಸಂಜೆ ಸಿಡಿಲು ಬಡಿದು ಮನೆಗೆ 10 ಸಾವಿರ ರೂ ಹಾನಿ ಸಂಭವಿಸಿದೆ, ಕುಕ್ಕುಂದೂರು ಗ್ರಾಮದ ನಡಿಬೆಟ್ಟು ದಿನೇಶ್ ಎಂಬವರ ಮನೆಗೆ ಸಿಡಿಲು ಬಡಿದು ವಿದ್ಯುತ್ ವಯರಿಂಗ್ ಸುಟ್ಟುಹೋಗಿ 15 ಸಾವಿರ ರೂ ನಷ್ಟ ಸಂಭವಿಸಿದೆ.



.
.
.
.
.
.
.
.
.
.
.
.
.
.
.
.
.
.
.
.
