
ನವದೆಹಲಿ,ಮೇ.21: ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್, ಮೋಸ್ಟ್ ವಾಂಟೆಡ್ ಭಯೋತ್ಪಾದಕನಾದ ಹಮ್ಜಾ ಬುರ್ಹಾನ್ ಎಂಬುವವನನ್ನು ಇಂದು ಪಾಕಿಸ್ತಾನದ ಮುಜಫರಾಬಾದ್ ಪ್ರದೇಶದಲ್ಲಿ ಗುಂಡಿಕ್ಕಿ ಕೊಲ್ಲಲಾಗಿದೆ. ಹಮ್ಜಾ ಬುರ್ಹಾನ್ ಎಂಬ ಭಯೋತ್ಪಾದಕನ ಮೇಲೆ ಅಪರಿಚಿತ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿ, ಹಲವಾರು ಸುತ್ತು ಗುಂಡುಗಳನ್ನು ಎಸೆದಿದ್ದಾರೆ. ಗುಂಡಿನ ದಾಳಿಗೆ ಗಂಭೀರವಾಗಿ ಗಾಯಗೊಂಡಿದ್ದ ಆತ ಕೊನೆಗೆ ಮೃತಪಟ್ಟಿದ್ದಾನೆ.
ನಿಷೇಧಿತ ಅಲ್-ಬದ್ರ್ ಭಯೋತ್ಪಾದಕ ಸಂಘಟನೆಯ ಕಮಾಂಡರ್ ಆಗಿದ್ದ ಹಮ್ಜಾ ಬುರ್ಹಾನ್ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮುಜಾಫರಾಬಾದ್ ನಗರದಲ್ಲಿದ್ದಾಗ ಅಪರಿಚಿತ ಸಶಸ್ತ್ರಧಾರಿಗಳು ಆತನ ಮೇಲೆ ಮನಬಂದAತೆ ಗುಂಡಿನ ದಾಳಿ ನಡೆಸಿದ್ದಾರೆ.
ಪುಲ್ವಾಮಾದ ರತ್ನಿಪೋರಾ ಪ್ರದೇಶದ ಖಾರ್ಬತ್ಪೋರಾದಲ್ಲಿ ಜನಿಸಿದ ಬುರ್ಹಾನ್ 2017 ರಲ್ಲಿ ಉನ್ನತ ಶಿಕ್ಷಣವನ್ನು ಪಡೆಯುವ ನೆಪದಲ್ಲಿ ಪಾಕಿಸ್ತಾನಕ್ಕೆ ತೆರಳಿದ್ದ. ಆದರೆ ಅಲ್ಲಿ ಆತ ನಿಷೇಧಿತ ಭಯೋತ್ಪಾದಕ ಸಂಘಟನೆ ಅಲ್-ಬದರ್ಗೆ ಸೇರ್ಪಡೆಯಾಗಿದ್ದ. ಅಲ್ಲದೇ ಅತಿ ಕಡಿಮೆ ಅವಧಿಯಲ್ಲಿಯೇ ಆ ಸಂಘಟನೆಯಲ್ಲಿ ಕಮಾಂಡರ್ ಹುದ್ದೆ ದಕ್ಕಿಸಿಕೊಂಡಿದ್ದ. ನಂತರ ಕಾಶ್ಮೀರಕ್ಕೆ ಹಿಂತಿರುಗಿ ಯುವಕರನ್ನು ಧಾರ್ಮಿಕ ಮತಾಂಧರನ್ನಾಗಿ ಮಾಡುವ ಮತ್ತು ಅವರಿಗೆ ಧರ್ಮ ಪ್ರಚಾರ ಮಾಡುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದ.
2019ರ ಫೆಬ್ರವರಿ 14ರಂದು ಪುಲ್ವಾಮಾದ ಲೆಥ್ಪೋರಾದಲ್ಲಿ ಸಿಆರ್ಪಿಎಫ್ ಜವಾನರ ಮೇಲೆ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 40 ಭಾರತೀಯ ಯೋಧರು ಹುತಾತ್ಮರಾಗಿದ್ದರು. ಈ ಇಡೀ ಭೀಕರ ದಾಳಿಯ ತನಿಖೆ ನಡೆಸಿದ ರಾಷ್ಟ್ರೀಯ ತನಿಖಾ ಸಂಸ್ಥೆ ಸಲ್ಲಿಸಿದ ಚಾರ್ಜ್ಶೀಟ್ನಲ್ಲಿ ಹಂಜಾ ಬುರ್ಹಾನ್ ಹೆಸರನ್ನು ಪ್ರಮುಖ ಸಂಚುಗಾರನಾಗಿ ಉಲ್ಲೇಖಿಸಲಾಗಿತ್ತು. ಗಡಿಯ ಆಚೆ ಕುಳಿತು ಭಾರತದಲ್ಲಿ ವಿಧ್ವಂಸಕ ಕೃತ್ಯಗಳಿಗೆ ಈತ ಹಣಕಾಸು ಮತ್ತು ಯೋಜನಾ ನೆರವು ನೀಡುತ್ತಿದ್ದಆತ ಈಗ ಕೊಲೆಯಾಗಿದ್ದಾನೆ.



.
.
.
.
.
.
.
.
.
.
.
.
.
.
.
.
.
.
.
.
