
ಕೋಲ್ಕತ್ತಾ,ಜೂ. 21: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು (ಜೂ.21) ಕೋಲ್ಕತ್ತಾದ ಶ್ಯಾಮ್ ಪ್ರಸಾದ್ ಮುಖರ್ಜಿ ಬಂದರಿನಲ್ಲಿ, ದೇಶೀಯವಾಗಿ ನಿರ್ಮಿಸಲಾದ ಮೂರು ಯುದ್ಧ ನೌಕೆಗಳನ್ನು ಭಾರತೀಯ ನೌಕಾಪಡೆಗೆ ಸೇರ್ಪಡೆಗೊಳಿಸಿದರು.
ಕೋಲ್ಕತ್ತಾದಲ್ಲಿ ಸಂಪೂರ್ಣ ಸ್ವದೇಶಿ ತಂತ್ರಜ್ಞಾನದಡಿ ನಿರ್ಮಿಸಲಾದ ಮೂರು ಸುಧಾರಿತ ಯುದ್ಧನೌಕೆಗಳಾದ ಐಎನ್‌ಎಸ್ ದುನಾಗಿರಿ, ಐಎನ್‌ಎಸ್ ಸಂಶೋಖಾಕ್ ಮತ್ತು ಐಎನ್‌ಎಸ್ ಅಗ್ರೇಗಳನ್ನು ಅಧಿಕೃತವಾಗಿ ಭಾರತೀಯ ನೌಕಾಪಡೆಗೆ ಸಮರ್ಪಿಸಿದ್ದಾರೆ.
ಕೇಂದ್ರ ಸರ್ಕಾರದ ‘ಆತ್ಮನಿರ್ಭರ ಭಾರತ’ ಯೋಜನೆಯಡಿ ಕೋಲ್ಕತ್ತಾದ ‘ಗಾರ್ಡನ್ ರೀಚ್ ಶಿಪ್‌ಬಿಲ್ಡರ್ಸ್ ಮತ್ತು ಎಂಜಿನಿಯರ್ಸ್’ (GRSE) ಸಂಸ್ಥೆಯು ಈ ಮೂರು ದೈತ್ಯ ನೌಕೆಗಳನ್ನು ನಿರ್ಮಿಸಿದೆ. ಇವುಗಳ ಸೇರ್ಪಡೆಯಿಂದಾಗಿ ಹಿಂದೂ ಮಹಾಸಾಗರದಲ್ಲಿ ಶತ್ರು ರಾಷ್ಟ್ರಗಳಾದ ಚೀನಾ ಮತ್ತು ಪಾಕಿಸ್ತಾನಕ್ಕೆ ನಡುಕ ಹುಟ್ಟಿಸುವಂತಹ ಬಲ ಭಾರತಕ್ಕೆ ಸಿಕ್ಕಂತಾಗಿದೆ.
ದುನಗಿರಿಯು ಬ್ರಹ್ಮೋಸ್ ಮೇಲ್ಮೈಯಿಂದ ಮೇಲ್ಮೈಗೆ ಕ್ಷಿಪಣಿಗಳು ಮತ್ತು ಮಧ್ಯಮ ಶ್ರೇಣಿಯ ಮೇಲ್ಮೈಯಿಂದ ಗಾಳಿಗೆ ಕ್ಷಿಪಣಿ ವ್ಯವಸ್ಥೆ ಸೇರಿದಂತೆ ಸುಧಾರಿತ ಶಸ್ತ್ರಾಸ್ತ್ರಗಳು ಮತ್ತು ಸಂವೇದಕಗಳನ್ನು ಹೊಂದಿದ್ದು, ಇದು ನೌಕಾಪಡೆಯ ಯುದ್ಧ ಸಾಮರ್ಥ್ಯಗಳನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ.ಇದು ಅತ್ಯಾಧುನಿಕ ರಹಸ್ಯ ಮಾರ್ಗದರ್ಶಿ ಕ್ಷಿಪಣಿ ಯುದ್ಧನೌಕೆಯಾಗಿದ್ದು, ಸಮುದ್ರದಲ್ಲಿ ಚಲಿಸುವಾಗಲೇ ಶತ್ರುಗಳ ಮೇಲೆ ಅಟ್ಯಾಕ್ ಮಾಡಬಲ್ಲದು.
ಐಎನ್ಎಸ್ ಅಗ್ರೇ ಕರಾವಳಿ ತೀರದಲ್ಲಿ ಅಡಗಿಕೊಳ್ಳುವ ಶತ್ರುಗಳ ಜಲಾಂತರ್ಗಾಮಿ ನೌಕೆಗಳನ್ನು ಪತ್ತೆಹಚ್ಚಿ ಧ್ವಂಸಗೊಳಿಸಲು ಇದನ್ನು ನಿರ್ಮಿಸಲಾಗಿದೆ.
ಐಎನ್ಎಸ್ ಸಂಶೋಖಾಕ್ (INS Samshokhak) – ಸಮುದ್ರದ ಹದ್ದಿನ ಕಣ್ಣು ಇದು ಸಮುದ್ರದಾಳದ ತಳವನ್ನು ಸಂಪೂರ್ಣವಾಗಿ ನಕ್ಷೆ ಮಾಡುವ ಮತ್ತು ಸುರಕ್ಷಿತ ಸಂಚರಣೆ ಮಾರ್ಗಗಳನ್ನು ಗುರುತಿಸುವ ಅತ್ಯಾಧುನಿಕ ಸಮೀಕ್ಷಾ ನೌಕೆಯಾಗಿದೆ. ಯುದ್ಧದ ಹೊರತಾಗಿ ಸಮುದ್ರದಲ್ಲಿ ಯಾವುದೇ ಪ್ರಕೃತಿ ವಿಕೋಪ ಅಥವಾ ತುರ್ತು ಪರಿಸ್ಥಿತಿ ಎದುರಾದರೆ, ಈ ನೌಕೆಯು ಬೃಹತ್ ‘ತೇಲುವ ವೈದ್ಯಕೀಯ ಕೇಂದ್ರವಾಗಿ’ ಬದಲಾಗಿ ಜೀವ ಉಳಿಸುವ ಕಾರ್ಯಾಚರಣೆ ನಡೆಸಬಲ್ಲದು.



.
.
.
.
.
.
.
.
.
.
.
.
.
.
.
.
.
.
.
.
